ಬಂಟ್ವಾಳ: ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ದೊಡ್ಡ ಸಾಧನೆಗಳ ಹಿಂದೆ ಇರುವುದು ಯುವ ಮನಸ್ಸುಗಳು. ಯುವ ಜನತೆ ಮನಸ್ಸು ಮಾಡಿದಾರೆ ಎಂತಹ ಅದ್ಭುತ ಸಾಧನೆಯನ್ನಾದರೂ ಮಾಡಬಹುದು. ಪ್ರತಿಯೊಬ್ಬ ವಿಜ್ಞಾನಿಯ ಸಾಧನೆಯ ಹಿಂದೆ ಒಂದು ಕುತೂಹಲಕರ ಮನಸ್ಸು ಇದೆ. ಅಂತಹ ಕುತೂಹಲವನ್ನು ಎಲ್ಲಾ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ| ಎ.ಪಿ.ರಾಧಾಕೃಷ್ಣ ಅವರು ಹೇಳಿದರು.

24 bcrd svsಇವರು ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ‘ಖಗೋಲ ಶಾಸ್ತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ದಿನನಿತ್ಯದ ಜೀವನದಲ್ಲಿ ಪ್ರಕೃತಿಯ ಬಗ್ಗೆ ಕುತೂಹಲವನ್ನು ತಳೆಯಬೇಕು. ಅದರಲ್ಲೂ ನಮ್ಮ ಸುತ್ತಮುತ್ತಲೂ ಇರುವ ಪರಿಸರವನ್ನು ಕುತೂಹಲದಿಂದ ಗಮನಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ರಾತ್ರಿಯ ಹೊತ್ತು ನಮ್ಮ ಆಕಾಶದ ಸೌಂದರ್ಯವನ್ನು ಆಸ್ವಾದಿಸುವುದಕ್ಕೆ ಮತ್ತು ಅದರಲ್ಲಿರುವ ಆಕಾಶಕಾಯಗಳ ಪರಿಚಯವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಹೆಚ್ಚಾಗಿ ಮೂಲವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ., ವಿದ್ಯಾರ್ಥಿಗಳು ವಿಜ್ಞಾನವನ್ನು ಪ್ರೀತಿಸಬೇಕು. ತಮ್ಮ ತಮ್ಮ ಆಸಕ್ತಿದಾಯಕ ವಿಜ್ಞಾನಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿ ಚಿನ್ಮಯ ಆಶಯ ಗೀತೆಯನ್ನು ಹಾಡಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಅನ್ವಿತಾ ಬಾಳಿಗಾ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕರಾದ ಉಪನ್ಯಾಸಕಿ ಕವಿತಾ ಅತಿಥಿಗಳ ಪರಿಚಯ ಮಾಡಿದರು. ವಿಜ್ಞಾನ ಸಂಘದ ಜೊತೆಕಾರ್ಯದರ್ಶಿ ಪ್ರೀತೇಶ್ ಎನ್. ವಂದಿಸಿದರು. ವಿದ್ಯಾರ್ಥಿನಿ ಸೌಭಾಗ್ಯ ಎ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *