ಬಂಟ್ವಾಳ: ಜೇಸಿಐ ಸಂಸ್ಥೆ ವೃತ್ತಿ ಕ್ಷೇತ್ರದ ಸಾಧನೆಗಾಗಿ ಕೊಡ ಮಾಡುವ ಸಾಧನಶ್ರೀ ಪ್ರಶಸ್ತಿಯನ್ನು ಬಂಟ್ವಾಳ ಜೇಸಿಐಯ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಭಾನುವಾರ ಬೆಳ್ಳಾರೆಯಲ್ಲಿ ನಡೆದ ವಲಯ 15ರ ವ್ಯವಹಾರ ಹಾಗೂ ಅಭಿವೃದ್ದಿ ವಿಭಾಗದ ಸಮ್ಮೇಳನದಲ್ಲಿ ಪಡೆದುಕೊಂಡರು.
ಈ ಸಂದರ್ಭ ವಲಯಾಧ್ಯಕ್ಷ ಕೃಷ್ಣ ಮೋಹನ್, ನಿಕಟಪೂರ್ವ ವಲಯಾಧ್ಯಕ್ಷ ಚಂದ್ರಶೇಖರ್ ನಾಯರ್, ಪೂರ್ವ ವಲಯಾದ್ಯಕ್ಷ ಅಲೆನ್ ರೋಹನ್, ವ್ಯವಹಾರ ವಿಭಾಗದ ನಿರ್ದೇಶಕ ರತ್ನಾಕರ ಕೆ, ವಲಯ ಉಪಾದ್ಯಕ್ಷ ರಾಧಕೃಷ್ಣ ಬಂಟ್ವಾಳ ಹಾಜರಿದ್ದರು.
ಕಳೆದ 12 ವರ್ಷಗಳಿಂದ ವಿವಿಧ ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಂಟ್ವಾಳ ಕಾರ್ಯನಿತರ ಪತ್ರಕರ್ತರ ಸಂಘದ ಪೂವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪತ್ರಕರ್ತರ ಸಂಘದ ರಜತ ವರ್ಷಾಚರಣೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.