ಕನ್ನಡ ಸಂಶೋಧನಾ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕಾರರ ಕೊಡುಗೆ ಅನನ್ಯವಾದುದು. ಆಧುನಿಕ ಸಂಶೋಧನೆಯ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಪ್ರಾಚೀನ ಇತಿಹಾಸಕಾರರು ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಇತಿಹಾಸಕಾರರ ಶ್ರಮ, ವಿದ್ವತ್ತು ಮತ್ತು ಬದ್ಧತೆಯ ಪರಿಣಾಮವಾಗಿ ಅಮೂಲ್ಯ ಸಂಶೋಧನಾ ಗ್ರಂಥಗಳು ಬೆಳಕು ಕಾಣುವಂತಾಯಿತು. ಪ್ರಾಚೀನ ಇತಿಹಾಸಕಾರರು ನಿಷ್ಠೆಯಿಂದ ನಿರ್ವಹಿಸಿದ ಕೆಲಸವು ಇಂದಿನ ಯುವ ಸಂಶೋಧಕರಿಗೆ ಮಾರ್ಗಸೂಚಿಯಾಗಿದೆ.ಪ್ರಾಚೀನ ವಿದ್ವಾಂಸರ ಬದುಕು-ಬರಹವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ನಡೆಯಬೇಕು. ಮಾತ್ರವಲ್ಲ, ನಮ್ಮ ಸಂಸ್ಕøತಿ, ಇತಿಹಾಸದ ಕುರಿತ ಅರಿವು ಯುವ ಜನಾಂಗದಲ್ಲಿ ಮೂಡಿಸುವ ಜರೂರು ವರ್ತಮಾನದ್ದಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಮ್ .ಜಾನಕಿ ಬ್ರಹ್ಮಾವರ ಅಭಿಪ್ರಾಯಪಟ್ಟರು.

ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಸಹಯೋಗದಲ್ಲಿ ನಡೆದ ‘ಇತಿಹಾಸಕಾರ ಪೊಳಲಿ ಶೀನಪ್ಪ ಹೆಗಡೆ ಬದುಕು-ಬರಹ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

Guest speech

Inaug
ಇತಿಹಾಸಕಾರ ಪೊಳಲಿ ಶೀನಪ್ಪ ಹೆಗ್ಗಡೆ ಬದುಕು-ಬರಹದ ಕುರಿತು ವಿಶೇಷ ಉಪನ್ಯಾಸ ಗೋಷ್ಠಿಯಲ್ಲಿ ಇತಿಹಾಸ ಸಂಶೋಧಕ ಡಾ.ಪುಂಡಿಕಾೈ ಗಣಪಯ್ಯ ಭಟ್ ಮಾತನಾಡಿ, ದಕ್ಷಿಣ ಕನ್ನಡದ ಇತಿಹಾಸ ನಿರ್ಮಾತೃಗಳಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆಯವರದು ದೊಡ್ಡ ಹೆಸರು. ಸಂಶೋಧನಾ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು ಮೊದಲಾದ ಮಹತ್ವದ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡ ಮತ್ತು ತುಳು ದ್ವಿಭಾಷೆಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿರುವ ಪೊಳಲಿ ಶೀನಪ್ಪ ಹೆಗ್ಗಡೆಯವರು ಸ್ವಾತಂತ್ರ್ಯ ಪೂರ್ವದ ಮೊದಲ ಹಂತದ ಸಂಶೋಧಕರಾಗಿ ಗಮನಸೆಳೆಯುತ್ತಾರೆ. ಈ ದೃಷ್ಟಿಯಿಂದ ಅವರ ನೆನಪಿನ ವಿಚಾರ ಸಂಕಿರಣವು ನೆಡಯುತ್ತಿರುವುದು ಔಚಿತ್ಯಪೂರ್ಣವಾದುದು ಎಂದರು.
ಮದ್ರಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ಅನುವಾದಿಸಿದ ‘ತುಳುನಾಡ ಇತಿಹಾಸ’ ಕೃತಿ ಬಿಡುಗಡೆಗೊಳಿಸಲಾಯಿತು. ಕೃತಿ ಕುರಿತು ಸಂತ ಅಲೋಷಿಯಸ್ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಡೆನ್ನಿಸ್ ಫೆರ್ನಾಂಡಿಸ್ ಮಾತನಾಡಿ, ‘ತುಳುನಾಡ ಇತಿಹಾಸ’ ಕೃತಿಯು ದಕ್ಷಿಣ ಕನ್ನಡದ ಇತಿಹಾಸ ಶೋಧನೆಯಲ್ಲಿ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನಮಾನ, ಇತಿಹಾಸ ಕುರಿತು ಒಳನೋಟಗಳುಳ್ಳ ವಿದ್ವತ್ ಗ್ರಂಥ ಇದಾಗಿದೆ ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಇತಿಹಾಸದ ಪ್ರಜ್ಞೆ ಅಗತ್ಯ .ವಿದ್ಯಾಸಂಸ್ಥೆಗಳಲ್ಲಿ ಇಂತಹ ವಿಚಾರ ಸಂಕಿರಣಗಳು ನಿರಂತರವಾಗಿ ನಡೆಯಬೇಕು ಎಂದು ವಿಚಾರ ಸಂಕಿರಣದ ಯಶಸ್ಸಿಗೆ ಶುಭ ಹಾರೈಸಿದರು.
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ವಿಚಾರ ಸಂಕಿರಣದ ರೂಪುರೇಷೆ ಕುರಿತು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಿ.ಎಂ. ಕುಲಾಲ್ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿ ಪವಿತ್ರ ಪ್ರಾರ್ಥಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *