ಬಂಟ್ವಾಳ: ಜಿಲ್ಲೆಯಾದ್ಯಂತ ಸುಮಾರು 500ಕ್ಕೂ ಮಿಕ್ಕಿ ಅಕ್ರಮ ಮರದ ಮಿಲ್ಲು ಕಾರ್ಯಾಚರಿಸುತ್ತಿದ್ದು, ತಾಲ್ಲೂಕಿನ ಸಜಿಪಪಡು ಮತ್ತು ಸಜಿಪನಡು ಗ್ರಾಮ ನಡುವಿನ ಕೋಟೆಕಣಿ ಎಂಬಲ್ಲಿ ಇಂತಹ ಮರದ ದಿಮ್ಮಿಗಳನ್ನು ಸಾಗಿಸುವ ಭಾರೀ ಗಾತ್ರದ ಲಾರಿಗಳು ಸಂಚರಿಸಿದ ಪರಿಣಾಮ ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
25btl-Kotekaniಇಲ್ಲಿನ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು ಐದಾರು ಅಕ್ರಮ ಮರದ ಮಿಲ್ಲಿನಿಂದ ಪರಿಸರ ಮಾಲಿನ್ಯದ ಜೊತೆಗೆ ಕೋಟೆಕಣಿ-ತಲೆಮೊಗರು ಸಾರ್ವಜನಿಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ವರ್ಷವಷ್ಟೇ ರೂ 3ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಮೂಲಕ ಅನುಷ್ಠಾನಗೊಂಡ ಕುಡಿಯುವ ನೀರಿನ ಯೋಜನೆ ಹಾನಿಗೀಡಾಗಿದೆ ಎಂದು ಆರೋಪಿಸಿ ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *