ಬಂಟ್ವಾಳ: ಸರ್ಕಾರಿ ಪ್ರಥಮದರ್ಜೆಕಾಲೇಜು ವಾಮದಪದವು ಇದರ ಮಾನವಿಕ ಸಂಘದ ಆಶ್ರಯದಲ್ಲಿ ಮಾನವಿಕ ವಿಭಾಗಗಳ ಅವಕಾಶಗಳು ಸವಾಲುಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Untitled-1 copyಉಪನ್ಯಾಸ ನೀಡಲು ಆಗಮಿಸಿದ ಶ್ರೀ.ಮಹಾವೀರ ಕಾಲೇಜು ಮೂಡಬಿದ್ರೆಇಲ್ಲಿನಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಧಕೃಷ್ಣ ಶೆಟ್ಟಿಯವರು ಮಾತನಾಡುತ್ತಾ “ಸಮಾಜ ವಿಜ್ಞಾನಗಳು ಬದುಕಿನತಲಸ್ಪರ್ಶದಅಧ್ಯಯನಕ್ಕೆ ಅವಕಾಶ ನೀಡುವುದರೊಂದಿಗೆ ವಾಸ್ತವಿಕ ಬದುಕಿಗೆ ಬೇಕಾದತಯಾರಿಯನ್ನು ಮಾಡುವ ವೇದಿಕೆಗಳಾಗಿವೆ. ಅರ್ಥಿಕ, ಸಾಮಾಜಿಕ, ರಾಜಕೀಯ, ಸ್ಥಿತಿಗತಿಗಳ ಅಧ್ಯಯನದಿಂದತುಲನಾತ್ಮಕ ನೆಲೆಯಲ್ಲಿನ ವಿಶ್ಲೇಷಣೆ ಸಾಧ್ಯ, ಪ್ರಚಲಿತ ವಿದ್ಯಾಮಾನಗಳ ಬಗೆಗಿನ ಅಧ್ಯಯನ, ಅಧ್ಯಯನ ಪ್ರವಾಸ, ಸಂಶೋಧನೆ, ಹೀಗೆ ಹಲವಾರು ಚಟುವಟಿಕೆಗಳನ್ನು ಮಾನವಿಕ ವಿಭಾಗದ ಮೂಲಕ ನಡೆಸಬಹುದುಎಂದರು”
ಕಾಲೇಜಿನ ಪ್ರಾಂಶುಪಾಲರದ ಪ್ರೊ.ಸೈಯದ್‍ಗೌಸ್‍ರವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹರಿಪ್ರಾಸಾದ್ ಬಿ.ಶೆಟ್ಟಿಯವರು ಪ್ರಸ್ತಾವನೆಗೈದರು. ಕಾಲೇಜಿನಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಸತೀಶ್‍ಗಟ್ಟಿ, Iಕಿಂಅ ಘಟಕದ ಸಂಚಾಲಕರಾದ ಡಾ.ಟಿ.ಕೆ.ಶರತ್‍ಕುಮಾರ್, ರಾಜ್ಯಶಾಸ್ತ್ರ ವಿಭಾಗದ ಶ್ರೀ.ಚಂದ್ರಶೇಖರ್, ಕುಮಾರಿತ್ರಿವೇಣಿ ಉಪಸ್ಥಿತರಿದ್ದರು.ಪೌಝೀಯಾರವರ ಸ್ವಾಗತದೊಂದಿಗೆ ಪ್ರಾರಂಭಗೊಂಡಕಾರ್ಯಕ್ರಮವುಕುಮಾರಿಚೈತ್ರರವರಧನ್ಯವಾದದೊಂದಿಗೆಕೊನೆಗೊಂಡಿತ್ತು. ಹೆಲೆನ್ ವಾಲ್ಡರ್‍ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *