ಬಂಟ್ವಾಳ : ತಾಲೂಕು ಪಿಲಾತಬೆಟ್ಟು ಗ್ರಾಮದ ಮೂರ್ಜೆ ಪೆಲತ್ತಕಟ್ಟೆ ಶಿವಾಜಿ ಕ್ರೀಡಾ ಸಂಘದ ಸಹಭಾಗಿತ್ವದಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಅಂಡರ್ಆರ್ಮ್ 40 ಗಜಗಳ ಕ್ರಿಕೆಟ್ ಪಂದ್ಯಾಟ ಪೆಲತ್ತಕಟ್ಟೆಯಲ್ಲಿ ಆ.30ರಂದು ಬೆಳಗ್ಗೆ ಗಂಟೆ 10ಕ್ಕೆ ಜರಗಲಿದೆ.
ಮಾಜಿ ಕಬಡ್ಡಿ ಆಟಗಾರ ಸೀತರಾಮ ಹೆಗ್ಡೆ ಹೊಸಮನೆ ಅವರು ಪಂದ್ಯಾಟ ಉದ್ಘಾಟಿಸಲಿರುವರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಲಿರುವರು. ಪ್ರಗತಿಪರ ಕೃಷಿಕ ಶ್ರೀಧರ್ ಪ್ರಭು ಮೂರ್ಜೆ, ಪಿಡಬ್ಲ್ಯಡಿ ಕಂಟ್ರಾಕ್ಟರ್ಮೋಹನ ಶೆಟ್ಟಿ ನರ್ವಲ್ದಡ್ಡ , ಬಂಟ್ವಾಳ ತಾ.ಪಂ.ಸದಸ್ಯ ರಮೇಶ್ ಕುಡುಮೇರ್, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷೆ ಸುಜಾತ ಪ್ರಕಾಶ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಸಮಾರೋಪದಲ್ಲಿ ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮಂಗಿಲ ಅವರು ಅಧ್ಯಕ್ಷತೆ ವಹಿಸಲಿರುವರು. ಪ್ರಗತಿಪರ ಕೃಷಿಕರಾದ ರಾಜೇಶ್ ನಾೈಕ್ ಉಳಿಪಾಡಿಗುತ್ತು , ಸಮಿತ್ರಾಜ್ ಜೈನ್ ಎಲ್ಪೇಲ್, ಉದ್ಯಮಿ ಭೋಜ ಶೆಟ್ಟಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಮಾಹಿತಿಗಾಗಿ ಸಂಪರ್ಕಿಸಿ ಮೊ.ಸಂ.: 9449156109, 8971153324ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.