ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನ ಕಟ್ಟಡವೊಂದರಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ವಿದ್ಯುತ್ ಬಿಲ್ಲು ಪಾವತಿಸದೆ ಸಂಪರ್ಕ ಕಡಿತಗೊಳಿಸಲು ಬಂದಿದ್ದ ಲೈನ್ಮೆನ್ಗೆ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಇಲ್ಲಿನ ನಿವಾಸಿ ಪರಮೆಶ್ವರ ಪೂಜಾರಿ ಎಂಬವರು ಕಳೆದ ಹಲವು ಸಮಯದಿಂದ ತನ್ನ ಅಂಗಡಿ ವಿದ್ಯುತ್ ಬಿಲ್ಲು ಪಾವತಿಸದಿರುವ ಹಿನ್ನೆಲೆಯಲ್ಲಿ ಲೈನ್ಮೆನ್ ಆಗಸ್ಟಿನ್ ಎಂಬವರು ಗುರುವಾರ ಸಂಜೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬಂದಿದ್ದರು ಎನ್ನಲಾಗಿದೆ. ಇದೇ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಪರಮೇಶ್ವರ ಪೂಜಾರಿ ಅವರು ಅವಾಚ್ಯ ಶಬ್ಧಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದಾರೆ ಆರೋಪಿಸಿ ಲೈನ್ಮೆನ್ ದೂರು ಸಲ್ಲಿಸಿರುವುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.