ಬಂಟ್ವಾಳ: ಬುದ್ದಿವಂತಜಿಲ್ಲೆಯಲ್ಲಿ ಕೋಮು ಗಲಭೆ ನಡೆಸುವವರು ಬುದ್ದಿ ಹೀನರು. ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿಪ್ರತಿಯೊಬ್ಬರು ಶ್ರಮಿಸುವ ಮೂಲಕ ಬುದ್ದಿವಂತರು ಎಂಬ ಹೆಸರು ಉಳಿಸಿಕೊಳ್ಳಲು ಪ್ರಯತ್ನಿಸಬೇಕುಎಂದು ಬಂಟ್ವಾಳ ಉಪವಿಭಾಗ ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಹುಲ್ಕುಮಾರ್ ಹೇಳಿದರು.
ಅವರು ಶನಿವಾರ ವಿಟ್ಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣಾದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಬಂಟ್ವಾಳ ಉಪವಿಭಾಗ, ವಿಟ್ಲ ಪೊಲೀಸ್ ಠಾಣೆಯ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಕೋಮು ಸೌಹಾರ್ದತೆಗಾಗಿ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಕೋಮು ಸೌಹಾರ್ದತೆಯನ್ನುಕಾಪಾಡುವ ನಿಟ್ಟಿನಲ್ಲಿಜೆಲ್ಲೆಯ ಮೊದಲ ಕಾರ್ಯಕ್ರಮವಾಗಿ ವಿಟ್ಲದಲ್ಲಿಆರಂಭವಾಗಿದೆ.ನಾವೆಲ್ಲಒಂದಾಗಿದ್ದಾಗಎಲ್ಲಾಕಡೆ ಸಂತೋಷ ನೆಲೆಸಿಕೊಳ್ಳುತ್ತದೆ ಎಂಬ ಗುರಿಯನ್ನು ಪ್ರತಿಯೊಬ್ಬ ಹೊಂದಬೇಕುಎಂದು ತಿಳಿಸಿದರು.
ಬಂಟ್ವಾಳ ತಾಲೂಕುಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಮೌನೇಶ ವಿಶ್ವಕರ್ಮಮಾತನಾಡಿ ಪ್ರೀತಿ ವಿಶ್ವಾಸದಿಂದ ಬಾಳುವ ಕಾರ್ಯಸಮಾಜದಲ್ಲಿ ನಡೆಯಬೇಕು.ಸುಶಿಕ್ಷಿತ ಸಮಾಜದಲ್ಲಿ ಸಾಮರಸ್ಯಕಾಪಾಡಲು ನಾವು ಸಹಕಾರಿಯಾಗಬೇಕು.ಮನಸ್ಸುಗಳನ್ನು ಒಂದಾಗಿಸುವ ಒಳ್ಳೆಯ ಪ್ರಯತ್ನಇದಾಗಿದೆಂದುಹೇಳಿದರು.
ಕಾರ್ಯಕ್ರಮಅಧ್ಯಕ್ಷತೆ ವಹಿಸಿದ ಬಂಟ್ವಾಳ ವೃತ್ತ ನಿರೀಕ್ಷಕಕೆ ಯು ಬೆಳ್ಳಿಯಪ್ಪ ಮಾತನಾಡಿಸಾಮಾಜಿಕಜಾಲ ತಾಣದಲ್ಲಿ ಬರುವ ಸಂದೇಶವನ್ನು ಓದಿ ಮರೆಯಬೇಕಾದ್ದನ್ನು ಬಿಟ್ಟಿಅದನ್ನೇ ಮನಸ್ಸಿನಲ್ಲೇ ಇಟ್ಟು ಸಮಾಜಘಾತುಕ ಕೆಲಸ ಮಾಡುವುದು ಸರಿಯಲ್ಲ.ಜನರುಒಂದಾಗಿದ್ದಾಗ ಮಾತ್ರಉತ್ತಮ ಭವಿಷ್ಯವಿರುತ್ತದೆ ಮತ್ತು ಪೊಲೀಸರ ಜೊತೆಗೆಎಲ್ಲರೂ ಕೈಜೋಡಿಸಿದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯಎಂದು ಹೇಳಿದರು.
ಅಂತರಾಷ್ಟ್ರೀಯಕಬಡಿ ಪಟುರೋಹಿತ್ ಮಾರ್ಲ, ರಾಷ್ಟ್ರೀಯಕಬಡಿ ಪಂದ್ಯಾಟದತೀರ್ಪುಗಾರ, ದೈಹಿಕ ಶಿಕ್ಷಣ ಶಿಕ್ಷಕ ವಿದ್ಯಾಶಂಕರ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಎಚ್ವಿಶ್ವನಾಥ, ಬಂಟ್ವಾಳ ತಾಲೂಕುಕಾರ್ಯನಿರತ ಪತ್ರಕರ್ತರ ಸಂಘದಕೋಶಾಧಿಕಾರಿ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.
ವಿಟ್ಲ ಪೊಲೀಸ್ಠಾಣೆಯ ಉಪನಿರೀಕ್ಷಕ ಪ್ರಕಾಶ್ದೇವಾಡಿಗ ಸ್ವಾಗತಿಸಿ, ಪ್ರಸ್ತಾವನೆಗೈದರು. ಪೊಲೀಸ್ ಸಿಬ್ಬಂದಿ ಪ್ರವೀಣ್ರೈ ವಂದಿಸಿದರು.ನೌಫಲ್ಕುಡ್ತೇಮುರು ಕಾರ್ಯಕ್ರಮ ನಿರೂಪಿಸಿದರು.