ಬಂಟ್ವಾಳ : ಎಲ್ಲಾ ಸಮಾಜದವರು ಸೇರಿ ಭಕ್ತಿಪೂರ್ವಕವಾಗಿ ಮಾಡಿದ ಸರ್ವ ಲಕ್ಷ್ಮೀಪೂಜೆ ನಿಜವಾಗಿಯೂ ದೇವಿಗೆ ಅರ್ಪಣೆಯಾಗುತ್ತದೆ ಎಂದು ಶಿವಗಿರಿ ಮಠ ಕೇರಳದ ಪರಮಪೂಜ್ಯ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನುಡಿದರು. ಅವರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ರಿ.ಸಜಿಪ ಮೂಡ ಇದರ ಆಶ್ರಯದಲ್ಲಿ ಸಜಿಪಮೂಡ ಸುಭಾಶ್ ನಗರ ಶ್ರೀ ಗುರುಕಲ್ಯಾಣ ಮಂಟಪದಲ್ಲಿ ಜರಗಿದ ಸಾಮೂಹಿಕ ವರಮಹಾಲಕ್ಷ್ಮಿ ವೃತ ಪೂಜೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವಿ ಚಂಚಲಸ್ವರೂಪಿ ಆದ್ದರಿಂದ ಮಹಿಳೆಯರು ದಿನಾ ಬೆಳಿಗ್ಗೆ ಲಕ್ಷ್ಮೀ ಪೂಜೆ ಮಾಡಿ ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕು ಎಂದು ಆಶೀರ್ವಚನವಿತ್ತರು.

DSC_5453

DSC_5521
ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ , ತಾ.ಪಂ.ಅಧ್ಯಕ್ಷ ಯಶವಂತ ಡಿ. , ಗ್ರಾ.ಪಂ.ಸದಸ್ಯ ವಿಶ್ವನಾಥ ಬೆಳ್ಚಡ, ಜಿಲ್ಲಾಧ್ಯಕ್ಷ ರಾಜೇಶ್ ಸುವರ್ಣ, ಹರೀಶ್ , ಪ್ರವೀಣ್ , ಬರ್ಕೆ ಮಹಾಬಲ ರೈ , ಇಂಜಿನಿಯರ್ ಸಂತೋಷ್ ಕುಮಾರ್ , ಮೋಹನ್ ದಾಸ್ ಪೂಜಾರಿ , ಕುಂಞ ಪೂಜಾರಿ , ಸಂತೋಷ್, ಶಾರದಾ ಪೂಜಾರಿ ಉಪಸ್ಥಿತರಿದ್ದರು.
ಲೋಕೇಶ್ ಪೂಜಾರಿ ಸ್ವಾಗತಿಸಿದರು. ಪುಷ್ಪಾ ವಂದಿಸಿ ಗಿರೀಶ್ ಪೆರ್ವ ಕಾರ್ಯಕ್ರಮ ನಿರ್ನಹಿಸಿದರು.

By suddi9

Leave a Reply

Your email address will not be published. Required fields are marked *