ಕೈಕಂಬ: ಬಡಕಬೈಲ್ ಶ್ರೀ ಕೃಷ್ಣ ಜನ್ಮಾಷ್ಠಮಿಯ ಮೊಸರು ಕುಡಿಕೆ ದಶಮಾನೋತ್ಸವದ ಸಮಾರಂಭವು ಸೆ.6ರಂದು ಭಾನುವಾರ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಬಡಕಬೈಲ್ ಕಲಾಶ್ರೀ ವೇದಿಕೆಯಲ್ಲಿ ಜರಗಲಿದೆ.
ವಿವಿಧ ರೀತಿಯ ಆಟೋಟ ಸ್ಪರ್ಧೆಗಳ ಉದ್ಘಾಟನೆಯು ಬೆಳಗ್ಗೆ 9ಗಂಟೆಗೆ ನಡೆಯಲಿದ್ದು. 9.30 ರಿಂದ ಮಕ್ಕಳೀಗೆ ವಿವಧ ರೀತಿಯ ಸ್ಪರ್ಧೆಗಳು ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ ,ಕೆಸರುಗದ್ದೆ ಓಟ ಹಾಗೂ ಹಗ್ಗಜಗ್ಗಾಟ, ಮಡಕೆ ಒಡೆಯುವುದು ಇತ್ಯಾದಿ. ಸಾಯಂಕಾಲ 5 ಗಂಟೆಗೆ ಜಿಲ್ಲೆಯ ಸುಪ್ರಸಿದ್ದ ಯುವ ಕಲಾವಿದರ ಕೂಡುವಿಕೆಯಲ್ಲಿ ” ಯಕ್ಷ-ಗಾನ-ವೈಭವ ”
ಇದರ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಧಾರ್ಮಿಕ ಉಪನ್ಯಾಸವನ್ನು ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂ.ಅಧ್ಯಕ್ಷ ಯಶವಂತ ದೇರಾಜೆ, ಪುದು ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ, ಉಧ್ಯಮಿಗಲಾದ ಭುವನೇಶ್ ಪಚಿನಡ್ಕ, ಜನಾರ್ಧನ ಶೆಟ್ಟಿ ಪುಂಚಮೆ, ಹೋಲಿ ಫ್ಯಾಮಿಲಿ ಅರ್ತಮೂವರ್ಸ್ ವಿಜಯಪ್ರಕಾಶ್ ಬೆಂಜನಪದವು, ಅಮ್ಮುಂಜೆ ಗ್ರಾ.ಪಂ . ಪಿಡಿಒ ನವೀನ್ ಭಂಡಾರಿ , ಕರಿಯಂಗಳ ಗ್ರಾ.ಪಂ.ಸದಸ್ಯ ಸುರೇಶ್ ಮಣಿಕಂಠಪುರ, ಕಲಾಶ್ರೀ ಮಿತ್ರಬಳಗದ ಗೌರವಧ್ಯಕ್ಷ, ಚಂದ್ರಶೇಖರ ಶೆಟ್ಟಿ, ಅಧ್ಯಕ್ಷ ಅರುಣು ಕುಮಾರ್ ಆಯೆರೆಮಾರ್,ಕಲಾಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಧನಲಕ್ಷ್ಮೀ ಉಪಸ್ಥಿತರಿರುವರು. ರಾತ್ರಿ 8.30 ರಿಂದ ಸಿಂಚರಾ ಆರ್ಕೆಸ್ಟ್ರಾ ಉಪ್ಪಿನಂಗಡಿ ಇವರಿಂದ ಸಂಗೀತ ರಸಮಂಜರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಲಾಶ್ರೀ ಮಿತ್ರಬಳಗದ ಪ್ರಕಟನೆ ತಿಳಿಸಿದೆ