ಕೈಕಂಬ: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಬಡಗಬೆಳ್ಳೂರು ,ಕೊಳತ್ತಮಜಲು ಇಲ್ಲಿಯ ಬ್ರಹ್ಮಶ್ರೀನಾರಾಯಣ ಗುರು ಮಂದಿರದಲ್ಲಿ 161 ನೇ ಜಯಂತಿ ಆಚರಣೆಯು ಆ.30ರಂದು ಭಾನುವಾರ ಆಚರಿಸಲಾಯಿತು. ಶನಿವಾರ ಬೆಳಗ್ಗೆ 6ರಿಂದ 7 ರವರೆಗೆ ಗಣಹೋಮ ಬೆಳಗ್ಗೆ 8 ಗಂಟೆಯಿಂದ ಮರುದಿನ ಆ.30ರವವರೆಗೆ 24 ಗಂಟೆಗಳ ನಿರಂತರ ಭಜನಾ ಕಾರ್ಯಕ್ರಮವು ಜರಗಿತು.
3

4

5

6

7

8

9

10

11 ಕಲಶಾಭಿಷೇಕ ಮಧ್ಯಾಹ್ನ ಲೋಕೇಶ್ ಶಾಂತಿ ಅವರ ಮಾರ್ಗದರ್ಶನದಲ್ಲಿ ನೆರವೇರಿತು. ನಂತರ  ಮಹಾಪೂಜೆ  ಜರಗಿತು.   ಈ ಸಂದರ್ಭದಲ್ಲಿ  ಪಂಚಗ್ರಾಮದ ಬಿಲ್ಲವ ಪಂಚಾಯತ್ ಸದಸ್ಯರನ್ನು   ಗಂಗಾಧರ್ ಪೂಜಾರಿ ಸನ್ಮಾನಿ ಅಭಿನಂದಿಸಿದರು . ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ಗಂಗಾಧರ್ ಪೂಜಾರಿ ಕೊಪ್ಪಳ, ಗೌರವಾಧ್ಯಕ್ಷ ತಾಚಪ್ಪ ಪೂಜಾರಿ , ರಾಜು ಕೋಟ್ಯಾನ್, ಉಮೇಶ್ ಪೂಜಾರಿ, ರೇವತಿ, ಸರೋಜಿನಿ, ನಿತ್ಯ ಅರ್ಚಕ ಜನಾರ್ಧನ, ಮಾಯಿಲಪ್ಪ್ ಪೂಜಾರಿ, ಗಂಗಯ್ಯ ಪೂಜಾರಿ,  ಬಡಗ ಬೆಳ್ಳೂರು   ಗ್ರಾ.ಪಂ. ಮಾಜಿ ಅಧ್ಯಕ್ಷೆ ವೇದಾವತಿ,   ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *