ಬಜ್ಪೆ: ಗುರುಪುರ ಕೈಕಂಬದಿಂದ ಮಸೀದಿ ರಸ್ತೆಯಾಗಿ ಮಳಲಿಗೆ ತೆರಳಲು ರಸ್ತೆಯಲ್ಲಿ ಕಸದ ಸಮಸ್ಯೆ ಬಿಗಡಾಯಿಸಿದ್ದು ಸ್ಥಳೀಯ ಗಂಜಿಮಠ ಪಂಚಾಯತ್ನವರು ವಿಲೇವಾರಿ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಪಂಚಾಯತ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
11000
ಮಸೀದಿ ರಸ್ತೆಯಿಂದ ಸ್ವಲ್ಪ ದೂರದವರೆಗೆ ಸಾಕಷ್ಟು ಮನೆಗಳಿವೆ. ಈ ಮನೆಯವರಿಗೆ ಕಸ ವಿಲೇವಾರಿ ಮಾಡುವುದ ಸಮಸ್ಯೆಯಾಗಿದ್ದು, ಇದನ್ನು ರಸ್ತೆ ಬದಿಯ ಕಮರಿಗೆ ಬಂದು ಸುರಿಯುತ್ತಿದ್ದಾರೆ.ಗುರುಪುರ ಕೈಕಂಬದ ಕೋಳಿ ಅಂಗಿಯವರು ಕೋಳಿಯ ತ್ಯಾಜ್ಯವನ್ನು ಇಲ್ಲಿಗೆ ತಂದು ಎಸೆಯುತ್ತಿದ್ದಾರೆ. ಇದರಿಂದ ಈ ಪ್ರದೇಶ ಡಂಪಿಂಗ್ ಯಾರ್ಡ್ ಆಗುವ ಸ್ಥಿತಿಗೆ ಬಂದೊದಗಿದೆ.
ಈ ಭಾಗದಲ್ಲಿ ಈಗಾಗಲೇ ಕೊಳೆತ ವಾಸನೆ ಬರುತ್ತಿದ್ದು, ಸಾರ್ವಜನಿಕರು ಸಂಚರಿಸದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ವರ್ಷಗಳ ಹಿಂದೆ ಈ ಭಾಗದಲ್ಲಿ ಸ್ಥಳೀಯ ಗಂಜಿಮಠ ಪಂಚಾಯತ್ ಕಸ ವಿಲೇವಾರಿಗೆಂದು ದೊಡ್ಡದೊಂದು ಗುಂಡಿ ನಿರ್ಮಿಸಿತ್ತು. ಈ ಗುಂಡಿ ಇದೀಗ ಕಸದಿಂದ ಮುಚ್ಚಿ ಮಾಯವಾಗಿ ಹೋಗಿದೆ.
ಪ್ರತೀ ವಾರ ಆ ಕಸವನ್ನು ವಿಲೇವಾರಿಗೊಳಿಸುವುದು ಪಂಚಾಯತ್ನ ಉದ್ದೇಶವಾಗಿತ್ತು. ಆದರೆ ಇದೀಗ ಆ ಕಸವನ್ನು ವಿಲೇವಾರಿಗೊಳಿಸದೆ ಹಲವು ತಿಂಗಳು ಕಳೆದಿದೆ. ಸ್ಥಳೀಯ ಪಂಚಾಯತ್ ಪ್ರತಿನಿಧಿ ಇದನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಸ್ಥಳೀಯರ ಗಂಭೀರ ಆರೋಪವಾಗಿದೆ. ಆದ್ದರಿಂದ ಇದೀಗ ಈ ಕಸವನ್ನು ಜಾನುವಾರುಗಳು ತಿನ್ನುತ್ತಿರುವುದು ಕಂಡುಬಂದಿದೆ. ಕಸದಿಂದ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಬಂದೊದಗಿದೆ.
ಈ ಬಗ್ಗೆ ಪಂಚಾಯತ್ ಅಧ್ಯಕ್ಷೆಯಲ್ಲಿ ಸಮಸ್ಯೆ ಹೇಳಿದರೆ ಕಸವಿಲೇವಾರಿ ಮಾಡಲು ಜನ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *