ಮೂಡುಬಿದಿರೆ:ನೆಲ್ಲಿಕಾರು ಗ್ರಾ.ಪಂ ವ್ಯಾಪ್ತಿಯ ಮಾಂಟ್ರಾಡಿ ಗ್ರಾಮವನ್ನು ಪೋಡಿಮುಕ್ತಗೊಳಿಸುವ ಕಾರ್ಯಕ್ರಮಕ್ಕೆ ನೆಲ್ಲಿಕಾರು ಗ್ರಾ.ಪಂ ಕಚೇರಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಪೂರಕವಾಗಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಂಗಳೂರು ಸಹಾಯಕ ಕಮಿಷನರ್ ಡಾ.ಅಶೋಕ್ ಕುಮಾರ್ ಮಾತನಾಡಿ, ಭೂಮಿ ಹೊಂದಿರುವವರಿಗೆ ಆರ್ಟಿಸಿ ಮಾಡಿಕೊಡುವ ವ್ಯವಸ್ಥೆ ಈ ಅಭಿಯಾನದಲ್ಲಿದೆ. ಸರ್ವೇ ಪ್ರತಿಹಂತದಲ್ಲಿ ಗ್ರಾಮಸ್ಥರು ಸಹಕರಿಸಬೇಕೆಂದರು.
ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿ, ಆರ್ಟಿಸಿಯಲ್ಲಿ ದೋಷವುಳ್ಳವರು ಅರ್ಜಿ ಸಲ್ಲಿಸಿದಲ್ಲಿ ತಕ್ಷಣವೇ ಸಮಸ್ಯೆ ಪರಿಹರಿಸಲಾಗುವುದು. 94ಸಿಯಡಿ ಬಂದಿರುವ 86 ಅರ್ಜಿಗಳನ್ನು 10ದಿನಗಳೊಳಗೆ ವಿಲೇವಾರಿ ಮಾಡಲಾಗುವುದು ಎಂದರು.
ತಾ.ಪಂ.ಸದಸ್ಯ ರುಕ್ಕಯ ಪೂಜಾರಿ,ಜಿ.ಪಂ.ಸದಸ್ಯೆ ಅಂಬಿಕಾ ಡಿ.ಶೆಟ್ಟಿ ನೆಲ್ಲಿಕಾರು ಗ್ರಾ.ಪಂ ಅಧ್ಯಕ್ಷ ಜಯಂತ ಹೆಗ್ಡೆ, ಪಂಚಾಯತ್ ಉಪಾಧ್ಯಕ್ಷೆ ಕುಶಲಾ, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ, ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಹಾಗೂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.