ಮೂಡುಬಿದಿರೆ: ತ್ರಿಭುವನ್ ಜೇಸಿಸ್ ಮೂಡುಬಿದಿರೆ ಇದರ ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮದಂಗವಾಗಿ ಬುಧವಾರ ಗ್ರೀನ್ ಡೇ ಆಚರಿಸಲಾಯಿತು.
9mood jci green
ಮೂಡುಬಿದಿರೆ-ಕಾರ್ಕಳ ರಾ.ಹೆ 169ರಲ್ಲಿ ಬನ್ನಡ್ಕ ಪಂಡಿತ್ ರೆಸಾರ್ಟ್ ಎದುರಿನಲ್ಲಿದ್ದ ತ್ಯಾಜ್ಯದ ರಾಶಿಗೆ ಮುಕ್ತಿ ತೆರವುಗೊಳಿಸಿ, ಜೆಸಿಬಿ ಯಂತ್ರದ ಮೂಲಕ ತೆಗೆದು ನೆಲವನ್ನು ಸಮತಟ್ಟುಗೊಳಿಸಲಾಯಿತು. ಬಳಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ನೆಡಲಾಯಿತು.
ಸಾರ್ವಜನಿಕರು ಕಸ ಎಸೆದು ಪರಿಸರ ಹಾಳಾಗದಂತೆ ಎಚ್ಚರಿಸುವ ಸೂಚನಾ ಫಲಕ ಅಳವಡಿಸಲಾಯಿತು.
ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ಶ್ರೀನಾಥ್ ಸುವರ್ಣ, ಅರಣ್ಯಾಧಿಕಾರಿ ಜಿ.ಡಿ. ದಿನೇಶ್, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಶಾಂತ್,ಪ್ರಕಾಶ್ ಶೆಟ್ಟಿ, ತ್ರಿಭುವನ್ ಜೇಸಿಸ್ ಅಧ್ಯಕ್ಷ ಧೀರೇಂದ್ರ ಜೈನ್, ಕಾರ್ಯದರ್ಶಿ ಸುದೀಪ್ ಬುನ್ನನ್, ಪುರಸಭಾ ಸದಸ್ಯ ಪಿ.ಕೆ.ಥೋಮಸ್,ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾ.ಪಂ. ಸದಸ್ಯ ದಯಾನಂದ ಪೈ, ಅಭಿನಂದನ್ ಬಲ್ಲಾಳ್, ಉಮೇಶ್, ಸೂರಜ್ ಬನ್ನಡ್ಕ , ಜೇಸಿ ಯೋಜನೆಯ ನಿರ್ದೇಶಕ ಉಮೇಶ್ ರಾವ್,ಸಿ.ಎಚ್. ಗಫೂರ್, ಪ್ರತಾಪ್ ಕುಮಾರ್, ಜೇಸೀ ಸಪ್ತಾಹ ಸಂಯೋಜಕ ಅಭಿಜಿತ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *