ಬಂಟ್ವಾಳ : ಗೆಳೆಯರ ಬಳಗ ಸಜಿಪ-ನಡು ಇದರ ಆಶ್ರಯದಲ್ಲಿ ದೇರಾಜೆ ನೇತಾಜಿ ಮೈದಾನದಲ್ಲಿ ಬೆಳ್ಳಿ ಹಬ್ಬದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮವನ್ನು ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್ ಉದ್ಘಾಟಿಸಿದರು.
ಬಿ.ಸಿ.ರೋಡ್ ರಕ್ತೇ ಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲ ಸುವರ್ಣ , ಸಜಿಪ ಮೂಡ ಗ್ರಾಮ ಪಂ.ಸದಸ್ಯ ವಿಶ್ವನಾಥ ಬೆಳ್ಚಡ , ಸುರೇಶ್ ಪೂಜಾರಿ ಸಾರ್ತಾವು , ಸಜಿಪ-ನಡು ಗ್ರಾ.ಪಂ.ಉಪಾಧ್ಯಕ್ಷೆ ಸುನೀತಾ ಶಾಂತಿ ಮೊರಾಸ್, ಅಧ್ಯಕ್ಷ ಜೀವನ್ ಕುಮಾರ್ , ಚೆನ್ನಪ್ಪ ಕುಲಾಲ್ , ವಿಜಯ ಕುಮಾರ್, ರಾಘವ ಪೂಜಾರಿ ಉಪಸ್ಥಿತರಿದ್ದರು.
