ಬಂಟ್ವಾಳ : ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿ ತು ಳು ಲಿಪಿ ಕಲಿಕಾ ಕಾರ್ಯಗಾರ ಸೆ. 10ರಂದು ಗುರುವಾರ ಅಪರಾಹ್ನ ಜರಗಿತು. ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ತುಳು ಲಿಪಿಗಳನ್ನು ಶಾಲೆಗಳಲ್ಲಿ ಕಲಿಸುವ ಮೂಲಕ ಮತ್ತೆ ಪ್ರಚಾರಕ್ಕೆ ತರುವ ಅವಶ್ಯಕತೆ ಇದೆ ಎಂದು ನುಡಿದರು.
DSCN0753
ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ತುಳು ಲಿಪಿ ಕಲಿಸುವ ಕಾರ್ಯವನ್ನು ಕಳೆದ ವರ್ಷದಿಂದ ಪ್ರಾರಂಭವಾಗಿದೆ ಇದು ನಿರಂತರವಾಗಿ ಮುಂದುವರಿಯಲಿದೆ ಎಂದರು. ಮುಖ್ಯೋಪಾಧ್ಯಾಯಿನಿ ಭಾರತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರಿ. ಬಿ.ತಮ್ಮಯ್ಯ ಮತ್ತು ದಿನಕರ್ ತುಳು ಲಿಪಿ ಶಿಕ್ಷಕರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕಿ ಯಶೋಮತಿ ಸ್ವಾಗತಿಸಿದರು. ಶಿಕ್ಷಕ ಸುಧಾಕರ ವಂದಿಸಿ, ತುಳು ಲಿಪಿ ಶಿಕ್ಷಕಿ ಸುಧಾ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *