ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸೆ17 ರಂದು ಗುರುವಾರ ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಇಲ್ಲಿಯ ಆಶ್ರಮದ ಮೌಲಾನ ಎಂಬ ವಿದ್ಯಾರ್ಥಿ ಆವೆ ಮಣ್ಣನ್ನು ತಂದು ಗಣಪತಿ ಮೂರ್ತಿಗೆ ಯಾವುದೇ ಬಣ್ಣ ಹಚ್ಚದೆ ಆವೆ ಮಣ್ಣಿನಿಂದಲೇ ಗಣೇಶನ ಮೂರ್ತಿಯನ್ನು ಮಾಡಿ ಅದನ್ನು ಗಣೇಶ ಹಬ್ಬದಂದು ರಾಮಕೃಷ್ಣ ಆಶ್ರಮದಲ್ಲಿ ಪ್ರತಿಸ್ಠಾಪಿಸಿ ಬೆಳಗ್ಗೆ ಭಜನೆ, ಹೋಮ ನಡೆಯಿತು.

ಸ್ವಾಮಿ ವಿವೇಕ ಚೈತನ್ಯಾನಂದ ಪೂಜೆ ನೆರವೇರಿಸದಿದರು ಸಾಯಂಕಾಲ 7ಗಂಟೆಗೆ ಗಣೇಶ ಮೂರ್ತಿಯನ್ನು ಆಶ್ರಮದ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.






