ಬಂಟ್ವಾಳ: ಲಾಲ್ಬಹದ್ದೂರು ಶಾಸ್ತ್ರಿ ಮೈದಾನ ಅಮ್ಟೂರು ಇಲ್ಲಿ ಶಾಶ್ವತ ಸಭಾ ವೇದಿಕೆಯನ್ನು ಅಮ್ಟೂರು ಶ್ರೀಕೃಷ್ಣ ಮಂದಿರದ ವತಿಯಿಂದ ನವೀಕರಿಸಲಾಯಿತು.
ಇದರ ಉದ್ಘಾಟನೆಯನ್ನು ಅಮ್ಮೂರಿನ ಹಿರಿಯರು ನೋಣಯ್ಯ ಪೂಜಾರಿ ರಾಯಪ್ಪಕೋಡಿ ಹಾಗೂ ಮಹಾಬಲ ಶೆಟ್ಟಿ ನಂದಾಗೋಕುಲ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಭಾ ವೇದಿಕೆ ಊರಿನ ಎಲ್ಲರಿಗೂ ಉತ್ತಮ ಕಾರ್ಯಕ್ರಮ ನಡೆಸುವುದಕ್ಕೆ ಪ್ರಯೋಜನವಾಗಲಿ ಎಂದು ನೋಣಯ್ಯ ಪೂಜಾರಿ ಮಾತನಾಡುತ್ತಾ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ, ಮಂದಿರದ ಗೌರವ ಸಲಹೆಗಾರರು ರಮೇಶ್ ಕರಿಂಗಾಣ, ಅಧ್ಯಕ್ಷರು ದಯಾನಂದ ಪೂಜಾರಿ, ಕಾರ್ಯದರ್ಶಿ ವೇಣುಗೋಪಾಲ, ಅರ್ಚಕರು ರಾಮಚಂದ್ರ ಭಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕುಶಾಲಪ್ಪ ಅಮ್ಟೂರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಧನ್ಯವಾದಗೈದರು.