ಬಂಟ್ವಾಳ: ಲಾಲ್‍ಬಹದ್ದೂರು ಶಾಸ್ತ್ರಿ ಮೈದಾನ ಅಮ್ಟೂರು ಇಲ್ಲಿ ಶಾಶ್ವತ ಸಭಾ ವೇದಿಕೆಯನ್ನು ಅಮ್ಟೂರು ಶ್ರೀಕೃಷ್ಣ ಮಂದಿರದ ವತಿಯಿಂದ ನವೀಕರಿಸಲಾಯಿತು.
IMG-20151003-WA0035ಇದರ ಉದ್ಘಾಟನೆಯನ್ನು ಅಮ್ಮೂರಿನ ಹಿರಿಯರು ನೋಣಯ್ಯ ಪೂಜಾರಿ ರಾಯಪ್ಪಕೋಡಿ ಹಾಗೂ ಮಹಾಬಲ ಶೆಟ್ಟಿ ನಂದಾಗೋಕುಲ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಭಾ ವೇದಿಕೆ ಊರಿನ ಎಲ್ಲರಿಗೂ ಉತ್ತಮ ಕಾರ್ಯಕ್ರಮ ನಡೆಸುವುದಕ್ಕೆ ಪ್ರಯೋಜನವಾಗಲಿ ಎಂದು ನೋಣಯ್ಯ ಪೂಜಾರಿ ಮಾತನಾಡುತ್ತಾ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ, ಮಂದಿರದ ಗೌರವ ಸಲಹೆಗಾರರು ರಮೇಶ್ ಕರಿಂಗಾಣ, ಅಧ್ಯಕ್ಷರು ದಯಾನಂದ ಪೂಜಾರಿ, ಕಾರ್ಯದರ್ಶಿ ವೇಣುಗೋಪಾಲ, ಅರ್ಚಕರು ರಾಮಚಂದ್ರ ಭಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕುಶಾಲಪ್ಪ ಅಮ್ಟೂರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಧನ್ಯವಾದಗೈದರು.

By suddi9

Leave a Reply

Your email address will not be published. Required fields are marked *