ಮೂಡುಬಿದಿರೆ: ಮೂಡುಬಿದಿರೆ ಬಸ್ನಿಲ್ದಾಣದ ಮುಖ್ಯಧ್ವಾರದ ಬಳಿ ಹೂವಿನ ವ್ಯಾಪಾರಿಯಾಗಿದ್ದ, ಹಿಂದೂ ಸಂಘಟನೆ ಕಾರ್ಯಕರ್ತನನ್ನು ಶುಕ್ರವಾರ ಅಪರಿಚಿತ ತಂಡವೊಂದು ಕೊಲೆ ಮಾಡಿದ್ದು, ಮೂಡುಬಿದಿರೆ ಪೇಟೆಯನ್ನು ಬಂದ್ ಮಾಡಲಾಗಿದೆ.


ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಮೂಡುಬಿದಿರೆಯ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಬಸ್, ಆಟೋಗಳು ಕೂಡ ಪೇಟೆಯ ರಸ್ತೆಗೆ ಇಳಿಯುತ್ತಿಲ್ಲ.
ಕ್ಯಾಮರಕ್ಕೆ ಹಾನಿ: ಘಟನಾ ಸ್ಥಳಕ್ಕೆ ವರದಿ ಮಾಡಲು ಹೋಗಿದ್ದ ಟಿ.ವಿ ವರದಿಗಾರನ ಕ್ಯಾಮರಕ್ಕೆ ಗುಂಪೊಂದು ಹಾನಿಗೊಳಿಸಿದೆ.





