ಮೂಡುಬಿದಿರೆ: ಮಂಗಳೂರು ವಿ.ವಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ನಡೆದ ಗುಡ್ಡಗಾಡು ಓಟದಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿ ಹಾಗೂ ಮಹಿಳೆಯರ ವಿಭಾಗದಲ್ಲಿ ಪಂಜಾಬಿ ವಿ.ವಿ ಪಟಿಯಾಲ ಸಮಗ್ರ ಪ್ರಶಸ್ತಿ ಪಡೆದಿದೆ.

ಪುರುಷರ ವಿಭಾಗದಲ್ಲಿ ರೋಟಕ್ ಎಂ.ಡಿ ವಿ.ವಿ ದ್ವಿತೀಯ, ಪಂಜಾಬಿ ಪಟಿಯಾಲ ತೃತೀಯ ಹಾಗೂ ದೆಹಲಿ ವಿ.ವಿ ನಾಲ್ಕನೆ ಸ್ಥಾನ ಪಡೆದಿದೆ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿ.ವಿ ದ್ವಿತೀಯ, ಕ್ಯಾಲಿಕಟ್ ವಿ.ವಿ ತೃತೀಯ ಹಾಗೂ ಪುಣೆ ಸಾವಿತ್ರಿಭಾಯಿ ಪುಲೇ ವಿ.ವಿ ನಾಲ್ಕನೇ ಸ್ಥಾನ ಪಡೆದಿದೆ.
ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ನ ರಂಜಿತ್ ಕುಮಾರ್ ಪಟೇಲ್ ಪ್ರಥಮ ಸ್ಥಾನಿಯಾದರೆ, ಮಹಿಳೆಯರ ವಿಭಾಗದಲ್ಲಿ ಪುಣೆ ಸಾವಿತ್ರಿಭಾಯಿ ಪುಲೇ ವಿ.ವಿ.ಯ ಜಾದವ್ ಸಂಜೀವಿನಿ ಪ್ರಥಮ ಸ್ಥಾನ ಪಡೆದರು. ವೀರ್ ಮಹಮ್ಮದ್ ಗುಜರಾತ್ ವಿ.ವಿಯ ಗೊವಿತ್ ಮೌರಿ-ದ್ವಿತೀಯ, ಅಭಿಷೇಕ್ ಪಾಲ್ತೃತೀಯ ತೃತೀಯ ಸ್ಥಾನ ಪಡೆದಿದ್ದಾರೆ.ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿ.ವಿ.ಯ ಫೂಲನ್ ಪಾಲ್ ದ್ವಿತೀಯ ಹಾಗೂ ಪಂಜಾಬಿ ಪಟಿಯಾಲದ ಮಂಜು ಜಾದವ್ ತೃತೀಯ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್,ಮಂಗಳೂರು ವಿ.ವಿ ಉಪಕುಲಪತಿ ಪ್ರೊ.ಕೆ ಬೈರಪ್ಪ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಚೆನೈ ಎಸ್.ಆರ್.ಎಂ ವಿ.ವಿಯ ಕ್ರೀಡಾ ನಿರ್ದೇಶಕ ಕೆ.ವೈದ್ಯನಾಥನ್,ಮದ್ರಾಸ್ ವಿ.ವಿ ಕ್ರೀಡಾ ನಿರ್ದೇಶಕ ಮಹಾದೇವನ್, ಕ್ರೀಡಾ ವೀಕ್ಷಕ ರಾಕೇಶ್ ಗುಪ್ತಾ ದೆಹಲಿ, ಕ್ರೀಡಾಕೂಟ ಸಂಘಟನಾ ಕಾರ್ಯಾಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಮಂಗಳೂರು ವಿ.ವಿ ರಿಜಿಸ್ಟ್ರಾರ್ ಪ್ರೊ. ಪಿ.ಎಸ್ ಯಡಪಡಿತ್ತಾಯ ವಿದ್ಯಾಗಿರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಚಾಲನೆ: ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಭಾನುವಾರ ಮುಂಜಾನೆ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಿದ್ದಾರೆ. ಮಂಗಳೂರು ವಿ.ವಿ ಉಪಕುಲಪತಿ ಪ್ರೊ.ಕೆ ಬೈರಪ್ಪ ಅಧ್ಯಕ್ಷೆ ವಹಿಸಿದ್ದರು.
ಫೋಟೋ- ರವಿ ಕೋಟ್ಯಾನ್, ಮಾನಸ ಡಿಜಿಟಲ