ಸ್ನೇಹ ಸಂಪತ್ತು ಬದುಕಿನ ಶ್ರೇಷ್ಠ ಸಂಪತ್ತು: ಅಂಬಾತನಯ ಮುದ್ರಾಡಿ

ಮುಂಬಯಿ, : ಸ್ನೇಹ ಸಂಪತ್ತು ಬದುಕಿನ ಶ್ರೇಷ್ಠ ಸಂಪತ್ತು ಆಗಿದೆ. ಇದನ್ನೇ ಜಿಟಿಎ ಗಳಿಸಿದ್ದು. ಉಷಾ-ಸ್ನೇಹರೇ ಇವರ ಸಂಪಾದನೆ ಆಗಿದ್ದು ಬಾಕಿ ಎಲ್ಲವೂ ಮಿತ್ರ ಸಂಪಾದನೆ ಮಾತ್ರ. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ರಕ್ತ ಸಂಬಂಧಿಗಳಲ್ಲದ ಹೃದಯ ಸಂಬಂಧಿಗಳನ್ನು ಗಳಿಸಿ ಉಳಿಸಿ ಮೆರ್ಯುತ್ತಿರುವ ಜಿಟಿಎ ಅವರ ಋಣದ ಅನುಬಂಧ ಪಾವಿತ್ರ್ಯವುಳ್ಳದಾಗಿದೆ. ಇದು ಋಣದ ಕಾರ್ಯಕ್ರಮವಾಗಿದ್ದು, ಬಾವಭಾವನೆಗಳ ಬಾಂಧವ್ಯದ ಸಂಕೇತವಾಗಿದೆ ಎಂದು ನಾಡಿನ ಹೆಸರಾಂತ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ ಹರಿದಾಸ ಅಂಬಾತನಯ ಮುದ್ರಾಡಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಮಾಟುಂಗ ಪಶ್ಚಿಮದ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ತುಳು-ಕನ್ನಡಿಗರ ಸ್ನೇಹಜೀವಿ ಜಿ.ಟಿ ಆಚಾರ್ಯರ ಅರ್ವತ್ತರ ಅಭಿನಂದನಾ ಸಮಾರಂಭ ಹಾಗೂ `ಸ್ನೇಹ-ಸಂಪದ ಗ್ರಂಥ ಗೌರವ’ ಅನಾವರಣದ ಭವ್ಯ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿ ಅಂಬಾತನಯ ಮುದ್ರಾಡಿ ಮಾತನಾಡಿದರು.

G.T.Acharya (Abhinandhanna Grantha)-2 G.T.Acharya (Abhinandhanna Grantha)-3 G.T.Acharya (Abhinandhanna Grantha)-4 G.T.Acharya (Abhinandhanna Grantha)-5 G.T.Acharya (Abhinandhanna Grantha)-6 G.T.Acharya (Abhinandhanna Grantha)-7 G.T.Acharya (Abhinandhanna Grantha)-8 G.T.Acharya (Abhinandhanna Grantha)-10 G.T.Acharya (Abhinandhanna Grantha)-11 G.T.Acharya (Abhinandhanna Grantha)-12 G.T.Acharya (Abhinandhanna Grantha)-13 G.T.Acharya (Abhinandhanna Grantha)-20 G.T.Acharya (Abhinandhanna Grantha)-22 G.T.Acharya (Abhinandhanna Grantha)-23 G.T.Acharya (Abhinandhanna Grantha)-A2

ಗುರುತಿಸುವ ಕಣ್ಣು, ಗೌರವಿಸುವ ಹೃದಯವುಳ್ಳ ಇವರ ಬದುಕಿಗೆ ಉಷೆಯ ಹೊಂಬೆಳಕು ಧಾರಕಾರವಾಗಿದ್ದ ಕಾರಣ ಜಿಟಿಎ ಸರ್ವ ಧರ್ಮಿಯರನ್ನು ಒಗ್ಗೂಡಿಸಿ ಸಾಮರಸ್ಯದ ಪ್ರತೀಕರಾಗಿದ್ದಾರೆ. ಆದುದರಿಂದಲೇ ಜಿಟಿ ಎಲ್ಲರ ಆಸ್ತಿ ಆಗಿದ್ದಾರೆ. ಜಾತ್ಯಾತೀಯ ಮನೋಭಾವಿಗಳಿದ್ದರೆ ಅದು ಬರೇ ಮುಂಬಯಿಯಲ್ಲಿ ಮಾತ್ರ ಊರಿನಲ್ಲಿ ಜಾತಿಗಳೇ ಅತೀಯಾಗಿ ಮಾನವೀಯತೆ ಮರೆಯಾಗುತ್ತಿದೆ. ಜಾತಿ ಮೀರಿ ಬೆಳೆಯುತ್ತಿರುವ ಮುಂಬಯಿ ರಾಷ್ಟ್ರಕ್ಕೆ ಅನೂಕರಣೀಯ. ಅರ್ವತ್ತಕ್ಕೆ ಅರಳಿದ ಹರಳು ಬದುಕು ಇವರದ್ದಾಗಿದ್ದು, ಸೇವೆಯಿಂದ ಸಂತೃಪ್ತಿ ಪ್ರಾಪ್ತಿಸಿಕೊಂಡ ಪರೋಪಕಾರದ ಜೀವಿಯೇ ಜಿಟಿ ಆಚಾರ್ಯರು. ಹರೆಯ ಬರೇ ದೇಹಕ್ಕೆ ಹೊರತು ಮನಸ್ಸಿಗಲ್ಲ ಇದು ಜಿಟಿ ಆಚಾರ್ಯರಿಗೆ ಅನ್ವಯಿಸುತ್ತಿದ್ದು, ಸಮಾಜ ಸೇವೆಗಾಗಿ ಮೊತ್ತಲ ಮೊದಲ ಗ್ರಂಥ ಪಡೆದ ಇವರು ಶತಾಯುಷಿಯಾಗಿ ಬಾಳಲಿ ಎಂದು ಸಮಸ್ತರ ಪರವಾಗಿ ಅಂಬಾತನಯ ಮುದ್ರಾಡಿ ಜಿಟಿ ಆಚಾರ್ಯ ಪರಿವಾರಕ್ಕೆ ಶುಭಾರೈಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಜಯಕೃಷ್ಣ ಎ.ಶೆಟ್ಟಿ ಸ್ನೇಹ ಸಂಪದ ಅಭಿನಂದನಾ ಗ್ರಂಥ ಬಿಡುಗಡೆಗೊಳಿದರು.

ಅತಿಥಿs ಅಭ್ಯಾಗತರುಗಳಾಗಿ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮೂಹದ ಕಾರ್ಯಾಧ್ಯಕ್ಷ ಜಯರಾಮ ಎನ್.ಶೆಟ್ಟಿ, ಸಮಾಜ ಸೇವಕರುಗಳಾದ ನಿಟ್ಟೆ ದಾಮೋದರ ವಿ.ಆಚಾರ್ಯ, ಹೆಚ್.ಬಾಬು.ಪೂಜಾರಿ ಜೋಗೇಶ್ವರಿ ಉಪಸ್ಥಿತರಿದ್ದು, ಅರ್ವತ್ತರ ಜನ್ಮೋತ್ಸವದ ಅಂಗವಾಗಿ ಜಿ.ಟಿ ಆಚಾರ್ಯ ಮತ್ತು ಉಷಾ ಜಿ. ಆಚಾರ್ಯ ದಂಪತಿಗೆ ಶಾಲು ಹೊದೆಸಿ, ಬೃಹತ್ ಹಾರಾರ್ಪಣೆಗೈದು, ಫಲಪುಷ್ಪ, ಅಭಿನಂದನ ಗ್ರಂಥ, ಸ್ಮರಣಿಕೆ, ಅಭಿನಂದನಾ ಪತ್ರ ಮತ್ತು ನಿಧಿ ಸಮರ್ಪಿಸಿ ಅತಿಥಿüವರ್ಯರು ಅಭಿನಂದಿಸಿ ಸನ್ಮಾನಿಸಿದರು.

ಜಯಕೃಷ್ಣ ಶೆಟ್ಟಿ ಮಾತನಾಡಿ ಜಿಟಿ ಆಚಾರ್ಯರು ಸಮಸ್ತ ಸಮಾಜದ ಬಂಧು, ಸಹೋದರರಾಗಿದ್ದಾರೆ. ಅವರ ಸ್ನೇಹಮಯಿ ಜೀವನದ ವರ್ಚಸ್ಸು ಈ ಸಂಭ್ರಮಕ್ಕೆ ಕಾರಣವಾಗಿದೆ. ಇವರೋರ್ವ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸುಪುತ್ರರಾಗಿದ್ದಾರೆ ಎಂದರು.

ಅತಿಥಿüಗಳೂ ಸಂದರ್ಭೋಜಿತವಾಗಿ ಮಾತನಾಡಿ ಜಿ.ಟಿ ಆಚಾರ್ಯರ ಸೇವಾಸಕ್ತಿ ಇಡೀ ಸಮಾಜಕ್ಕೆ ಕೊಡುಗೆ ಮತ್ತು ಮಾದರಿ ಆಗಿದೆ. ಭವಿಷ್ಯತ್ತಿನಲ್ಲೂ ಇದು ಮುನ್ನಡೆಯಲಿ ಎಂದು ಶುಭಕೋರಿದರು. ಜಿ.ಟಿ ಆಚಾರ್ಯ ಮತ್ತು ಉಷಾ ಜಿ. ಆಚಾರ್ಯ ದಂಪತಿ ಅಭಿನಂದನಾ ಸಮಾರಂಭ ಹಾಗೂ ಸ್ನೇಹ-ಸಂಪದ ಗ್ರಂಥ ಗೌರವಕ್ಕೆ ಉತ್ತರಿಸಿ ಸರ್ವರನ್ನೂ ಅಭಿವಂದಿಸಿದರು.

ಮನುಷ್ಯ ಹುಟ್ಟುವಾಗ ಜಾತಿ, ಮತ ಧರ್ಮವನ್ನು ಪಡೆದು ಹುಟ್ಟುದಿಲ್ಲ. ಆದರೆ ಸ್ವಹಿತ ಸಮಾಜದ ಹಿತಾಸಕ್ತಿಗಳ ಕಲಿಯುವಿಕೆಯಲ್ಲಿ ಇದನ್ನೇಲ್ಲಾ ತಿಳಿದು ಮಾನವ ಮಾನವೀಯತೆ ಮರೆಯುತ್ತಾನೆ. ಮುಂದೆ ಜಾಮಧದ ಕೈಗೊಂಬೆಯಾಗಿ ಬದುಕನ್ನೇ ಅಂಧಾಕಾರದಲ್ಲಿ ಕಳೆಯುತ್ತಾನೆ. ಮನುಷ್ಯನಿಗೆ ಜಾತಿ, ಮತ ಧರ್ಮಕಿಂತ ಮಾನವೀಯತೆಯೇ ಪ್ರಧಾನವಾಗಿದೆ. ಇಂತಹ ವರ್ಗಕ್ಕೆ ಜಿಟಿ ಆಚಾರ್ಯರು ಸೇರಿದ್ದಾರೆ. ಅವರ ಸೇವಾ ಮನೋಭಾವ ಶ್ಲಾಘನೀಯ ಆದುದರಿಂದ ಇವರು ಧರ್ಮದರ್ಶಿಗೆ ಅರ್ಹರು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಸುರೇಶ್ ಭಂಡಾರಿ ಅಭಿಪ್ರಾಯ ಪಟ್ಟರು.

ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಶ್ರೀಧರ್ ವಿ.ಆಚಾರ್ಯ, ಉಪಾಧ್ಯಕ್ಷರುಗಳಾದ ಕೆ.ವಿ ಆಚಾರ್ಯ, ಕೆ.ಸುಂದರ್ ಆಚಾರ್ಯ, ಡಾ| ಭರತ್‍ಕುಮಾರ್ ಪೆÇಲಿಪು, ಜಯ ಕೆ.ಶೆಟ್ಟಿ, ಡಾ| ಎನ್.ಕೆ ಬಿಲ್ಲವ, ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಶ್ವೇತಾ ಪಿ.ಆಚಾರ್ಯ, ಪ್ರದೀಪ್ ಆಚಾರ್ಯ, ಮಾ| ಮಿಶಾಂತ್ ಪಿ.ಆಚಾರ್ಯ, ಸುಂದರ್ ಆಚಾರ್ಯ ಮೂಡಬಿದ್ರೆ, ಕೇಶವ ಆಚಾರ್ಯ ಮಂಗಳೂರು, ತ್ರಾಸಿ ಸುಧಾಕರ್ ಆಚಾರ್ಯ ಸೇರಿದಂತೆ ಸಮಿತಿ ಸದಸ್ಯರನೇಕರು ಉಪಸ್ಥಿತರಿದ್ದರು. ಉಪಸ್ಥಿತ ಹಲವಾರು ಸಂಘ-ಸಂಸ್ಥೆಗಳ ಮುಖ್ಯಸ್ಥರು ಆಚಾರ್ಯ ದಂಪತಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿ ಅಭಿನಂದಿಸಿದರು.

ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಗೈದರು. ಅಭಿನಂದನಾ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸುಖಾಗಮನ ಬಯಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಶ್ರೀಧರ್ ವಿ.ಆಚಾರ್ಯ ಗೌರವ ನುಡಿಗಳನ್ನಾಡಿದರು. ಗೌ| ಉಪಾಧ್ಯಕ್ಷ ಸುಧೀರ್ ಆರ್.ಎಲ್ ಶೆಟ್ಟಿ, ಕೋಶಾಧಿಕಾರಿ ಎಸ್.ಕೆ ಸುಂದರ್, ಜೊತೆ ಕೋಶಾಧಿಕಾರಿ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಅಭಿನಂದನಾ ಗ್ರಂಥದ ಸದಸ್ಯ ಎ.ನರಸಿಂಹ, ಡಾ| ಕೆ.ಮೋಹನ್, ಕೆ.ಕೆ ಶೆಟ್ಟಿ, ಕೆ.ಪಿ.ಸಿ ಚಂದ್ರಯ ಆಚಾರ್ಯ, ಎಸ್.ಕೆ ಸುಂದರ್, ಅಶೋಕ್ ಸಸಿಹಿತ್ಲು, ಉತ್ತಮ್ ಶೆಟ್ಟಿಗಾರ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ದಾಮೋದರ ಶೆಟ್ಟಿ ಇರುವೈಲು ಸನ್ಮಾನಪತ್ರ ವಾಚಿಸಿದರು. ಟಿ.ಜಿ ಆಚಾರ್ಯ ಬಾರ್ಕೂರು ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಜೊತೆ ಕಾರ್ಯದರ್ಶಿ ಗಣೇಶ್ ಕುಮಾರ್ ಕೆ. ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ `ಜಿ.ಟಿ.ಎ ಕಲಾತ್ಮಕ ಬದುಕು’ ಸಾಕ್ಷ ್ಯ ಚಿತ್ರ ಪ್ರದರ್ಶಿಸಲ್ಪಟ್ಟಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ನೃತ್ಯವೈಭವ, ಯಕ್ಷಗಾನ ನಾಟ್ಯವೈಭವವನ್ನಾಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಪೆರ್ಡೂರು ಮೇಳದ ಕಲಾಕಾರರು `ಭಕ್ತ ಚಂದ್ರಹಾಸ’ ಯಕ್ಷಗಾನ ಪ್ರದರ್ಶನ ಗೊಳಿಸಿದರು.

 

By suddi9

Leave a Reply

Your email address will not be published. Required fields are marked *