ಸೌತ್‍ಅಮೇರಿಕಾ ವಿಶ್ವವಿದ್ಯಾಲಯದ ಭಾರತ ರಾಷ್ಟ್ರದ ಸಹವರ್ತಕತ್ವದ ಘನತೆ
ಮುಂಬಯಿ, : ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಸಂಚಾಲಕತ್ವದ ಜಯಲಕ್ಷ್ಮೀ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಕಾರ್ಯಧ್ಯಕ್ಷ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಕರ್ನಾಟಕದ ಮಂಡ್ಯ ಜಿಲ್ಲಾ ಕೆ.ಆರ್ ಪೇಟೆ ಶಾಸಕ ಕೆ.ಸಿ ನಾರಾಯಣ ಗೌಡ ಅವರು ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದರು.

ಇಂದಿಲ್ಲಿ ಮುಂಬಯಿ ಉಪನಗರದ ಅಂಧೇರಿ ಪೂರ್ವದಲ್ಲಿನ ಹೊಟೇಲ್ ಸಾಯಿಪ್ಯಾಲೇಸ್‍ನಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಉಪಸ್ಥಿತ ಸೌತ್‍ಅಮೇರಿಕಾ ವಿಶ್ವವಿದ್ಯಾಲಯದ ಇದರ ಮುಂಬಯಿ ವಿಭಾಗೀಯ ಉಪ ರೆಜಿಸ್ಟ್ರಾರ್ ಡಾ| ಡಿ.ವಿ ಕುಲಕರ್ಣಿ ಹಾಗೂ ವೃಶಾಲಿ ಕುಲಕರ್ಣೆಅವರು ನಾರಾಯಣ ಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನಿಸಿ ಅಭಿನಂದಿಸಿದರು.

Dr. Narayana Gowda-C1

ಉಪಕುಲಪತಿಗಳು, ಸಿಂಡಿಕೇಟ್ ಅನುಮತಿ ಮತ್ತು ಭಾರತ ರಾಷ್ಟ್ರದ ಸಹವರ್ತಕರ (ಕಂಟ್ರಿ ಕೊ-ಆರ್ಡಿನೇಟರ್ ಇಂಡಿಯಾ) ಶಿಫಾರಸ್ಸುಗಳ ಮೇಲೆ ಭಾರತೀಯ ಸಮಾಜಕ್ಕೆ ಶಿಕ್ಷಣ ವಲಯದ ವಿಶೇಷ ಕಾಳಜಿ ವಹಿಸಿ ರಾಷ್ಟ್ರದ ಭವಿಷತ್ತಿನ ಶಕ್ತಿಯಾದ ವಿದ್ಯಾಥಿರ್üಗಳಿಗೆ ಸಹಾಯ, ಗ್ರಾಮೀಣ ಬಡಜನರ ಅಭಿವೃದ್ಧಿಗಾಗಿನ ನೆರವು, ಸಹಯೋಗ, ಕರ್ಮಭೂಮಿ ಮುಂಬಯಿಗೆ (ಮಹಾರಾಷ್ಟ್ರ) ವಲಸೆ ಬಂದ ಜನತೆಗೆ ಸಹಕಾರಿ ಸಂಸ್ಥೆ ಮುಖೇನ ಸ್ವಂತ ಉದ್ಯಮಕ್ಕೆ ಅನುವುಮಾಡಿ ಹಣಕಾಸು ಕ್ಷೇತ್ರದಲ್ಲೂ ಅನನ್ಯ ಸೇವೆ ನೀಡಿರುವುದು, ಸ್ವಂತಿಕೆಯ ಹೊಟೇಲು ಉದ್ಯಮದ ಮೂಲಕ ಪ್ರವಾಸೋದ್ಯಮ ಮತ್ತು ಆದರಾತಿಥ್ಯ ಪ್ರವಾಸೋದ್ಯಮದ ಅಭಿವೃದ್ಧಿ ಕೈಗೊಂಡು ಸರ್ಕಾರಕ್ಕ್ಕೂ ಸಹಾಯಹಸ್ತ ಮಾಡಿರುವುದು, ಕೊಳಚೆಗೇರಿ ವಾಸಿಗಳ (ಸ್ಲಮ್) ಅಭಿವೃದ್ಧಿ, ರಾಜಕಾರಣಿಯಾಗಿ ತವರೂರ ಕ್ಷೇತ್ರದ ಅತ್ಯಾದ್ಭುತ ಬೆಳವಣಿಗೆಯೊಂದಿಗೆ ಗ್ರಾಮೀಣಾಭಿವೃದ್ಧಿಗೆ ನೀಡಿರುವ ವಿಶೇಷ ಕೊಡುಗೆಗಳನ್ನು ಆಧರಿಸಿ ಅರ್ಹ ಅಭ್ಯಥಿರ್ü ಎಂದೆಣಿಸಿದ ನಾರಾಯಣ ಗೌಡ ಅವರಿಗೆ ಗೌರವ ಪದವಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ನವದೆಹಲಿಯ ಕೋಟ್ಲಾ ಮಾರ್ಗ್‍ನಲ್ಲಿನ ಸೌತ್ ಅಮೇರಿಕಾ ವಿಶ್ವವಿದ್ಯಾಲಯದ ಭಾರತ ರಾಷ್ಟ್ರದ ಕೇಂದ್ರ ಕಛೇರಿಯ ಯುನಿವರ್ಸಿಟಿ ನ್ಯೂಸ್‍ನ ಸಂಪಾದಕರಿಗೆ ಅಧಿಕೃತ ಪ್ರಕಟಣೆ ಮೂಲಕ ಯುನಿವರ್ಸಿಟಿ ಆಫ್ ಸೌತ್ ಅಮೇರಿಕಾ ಇದರ ರೆಜಿಸ್ಟರ್ ಮತ್ತು ಮೌಲ್ಯಮಾಪನಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದರು.

ಕಳೆದ ಆಗಸ್ಟ್ ಕೊನೆಯ ವಾರದಲ್ಲಿ ನವದೆಹಲಿಯಲ್ಲಿನ ಸೌತ್ ಅಮೇರಿಕಾ ವಿಶ್ವ ವಿದ್ಯಾಲಯದ ಭಾರತ ರಾಷ್ಟ್ರದ ಕೇಂದ್ರ ಕಛೇರಿಯಲ್ಲಿ ನಡೆಯ ಬೇಕಿದ್ದ ಘಟಿಕೋತ್ಸವದಲ್ಲಿ ಈ ಗೌರವ ಡಾಕ್ಟರೇಟ್ ಪ್ರದಾನಿಸಲಾಗುವುದು ಎಂದು ಸೌತ್ ಅಮೇರಿಕಾ ವಿಶ್ವವಿದ್ಯಾಲಯದ ಭಾರತ ರಾಷ್ಟ್ರದ ಸಂಯೋಜಕ ಅಶೋಕ್ ಎ.ಆರ್ ಗೌಡ ತಿಳಿಸಿದ್ದರಾದರೂ, ಕಾರಣಾಂತರವಾಗಿ ಈ ಕಾರ್ಯಕ್ರಮ ಮುಂದೂಡಿಸಲ್ಪಟ್ಟು ಇಂದಿಲ್ಲಿ ಮುಂಬಯಿಯಲ್ಲಿ ಜರುಗಿಸಲ್ಪಟ್ಟಿತು.

By suddi9

Leave a Reply

Your email address will not be published. Required fields are marked *