ಜಿ ಟಿ ಆಚಾರ್ಯರು ಓರ್ವ ಪ್ರತಿಭಾ ಸಂಪನ್ನರು:ಪಯ್ಯಾರು ರಮೇಶ್ ಶೆಟ್ಟಿ
ಮುಂಬಯಿ: ಮುಂಬಯಿಯ ತುಳು-ಕನ್ನಡಿಗರ ಸ್ನೇಹಜೀವಿ, ಸಾಂಸ್ಕೃತಿಕ ಸರದಾರ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಮತ್ತು ಗೋರೆಗಾಂವ್ ಕರ್ನಾಟಕ ಸಂಘಗಳ ಮಾಜಿ ಅಧ್ಯಕ್ಷ ಜಿ.ಟಿ ಆಚಾರ್ಯ ಅವರ ಅರವತ್ತರ ಅಭಿನಂದನಾ ಸಮಾರಂಭವು ಇಂದಿಲ್ಲಿ ಆದಿತ್ಯವಾರ ಮಾಟುಂಗ ಪಶ್ಚಿಮದ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಅದ್ದೂರಿಯಿಂದ ನೇರವೇರಿಸಲ್ಪಟ್ಟಿತು.

ಪೂರ್ವಾಹ್ನ ವೀರಕೇಸರಿ ಕಲಾವೃಂದ ಮುಂಬಯಿ ಅಧ್ಯಕ್ಷ ಪಯ್ಯಾರು ರಮೇಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಅಭಿನಂದನಾ ಸಂಭ್ರಮಕ್ಕೆ ಚಾಲನೆಯನ್ನಿತ್ತರು. ನಂತರ ಮಹಾನಗರದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ನೃತ್ಯವೈಭವ, ಯಕ್ಷಗಾನ ನಾಟ್ಯವೈಭವವನ್ನಾಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಮಧ್ಯಾಂತರದಲ್ಲಿ `ಜಿ.ಟಿ.ಎ ಕಲಾತ್ಮಕ ಬದುಕು’ ಸಾಕ್ಷ ್ಯ ಚಿತ್ರ ಪ್ರದರ್ಶಿಸಲ್ಪಟ್ಟಿತು.

G.T.Acharya (Abhinandhane) A3

G.T.Acharya (Abhinandhane) A4

G.T.Acharya (Abhinandhane) A6

G.T.Acharya (Abhinandhane)-1

G.T.Acharya (Abhinandhane)-2

G.T.Acharya (Abhinandhane)-6

G.T.Acharya (Abhinandhane)-7

G.T.Acharya (Abhinandhane)-8

G.T.Acharya (Abhinandhane)-11

G.T.Acharya (Abhinandhane)-12

G.T.Acharya (Abhinandhane)-13

G.T.Acharya (Abhinandhane)-17

G.T.Acharya (Abhinandhane)-19

ಪಯ್ಯಾರು ರಮೇಶ್ ಮಾತನಾಡಿ ಜಿ.ಟಿ ಆಚಾರ್ಯರು ಓರ್ವ ಪ್ರತಿಭಾ ಸಂಪನ್ನರು. ಸರ್ವರ ಸಂಪರ್ಕವನ್ನು ಸದೋದರತ್ವವನ್ನಾಗಿಸಿ ಇರಿಸಿದವರಾಗಿದ್ದಾರೆ. ಸಮಾಜ ಸೇವೆ, ಸಂಸ್ಕೃತಿ, ಧಾರ್ಮಿಕ ಸೇವೆಯಲ್ಲಿ ಅಪಾರ ಕಾಳಜಿ ಹೊಂದಿರುವ ಇವರು ನೇರ ನಡೆನುಡಿ ಮೈಗೂಡಿಸಿರುವರು. ಸಾಮರಸ್ಯದ ಸಮನ್ವಯಕ ಪ್ರತೀಕರಾಗಿ ಸರ್ವರ ಪ್ರೀಗೆ ಪಾತ್ರರಾದ ಇವರಿಗಾಗಿನ ಈ ಕಾರ್ಯಕ್ರಮ ಸ್ತುತ್ಯಾರ್ಹ. ಅರ್ವತ್ತರ ಹರೆಯ ಕಳೆದು ತನ್ನ ಯೌವನತ್ವದಿಂದ ದೂರ ಸರಿಯುತ್ತಾರೆ ಎನ್ನುವಾಗ ಬೇಸರವಾಗುತ್ತಿದ್ದರೂ ಹಿರಿಯ ನಾಗರಿಕರಾಗಿ ಎಲ್ಲರಿಗೂ ಮಾರ್ಗದರ್ಶಕ, ಮಾದರಿ ಆಗುವ ವ್ಯಕ್ತಿ ಆಗುತ್ತಿದ್ದಾರೆ ಎನ್ನಲು ಸಂತೋಷವೂ, ಅಭಿಮಾನವೂ ಆಗುತ್ತದೆ. ಭವಿಷ್ಯತ್ತಿನ್ನುದ್ದಕ್ಕೂ ಇವರಿಂದ ಅನನ್ಯ ಸಮಾಜ ಸೇವಾ ಕೊಡುಗೆ ಮುಂದುವರಿಯಲಿ. ಅಂತೆಯೇ ಶತಾಯುಷ್ಯದ ಬದುಕು ಇವರಿಗೆ ಪ್ರಾಪ್ತಿಯಾಗಲಿ ಎಂದು ಪಯ್ಯಾರು ರಮೇಶ್ ಶೆಟ್ಟಿ ಸರ್ವರ ಪರವಾಗಿ ಹಾರೈಸಿದರು.

ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಶ್ರೀಧರ್ ವಿ.ಆಚಾರ್ಯ ಅವರು ಜಿ.ಟಿ ಆಚಾರ್ಯರ ಬದುಕಿನ ಸೇವಾ ಕ್ಷಣಗಳ ವರದಿ ಪ್ರಕಾಶಿತ ಕೋಲಾಜ್ ಫಲಕ ಅನಾವರಣಗೊಳಿಸಿ ಇದನ್ನು ಸಿದ್ಧ ಪಡಿಸಿದ ಪ್ರದೀಪ್ ಆಚಾರ್ಯ, ಸಂಧ್ಯಾ ಪಿ.ಆಚಾರ್ಯ, ನಿತೀನ್ ಆಚಾರ್ಯ ಮತ್ತು ಶರದ್ ಆಚಾರ್ಯ ಅವರನ್ನು ಪುಷ್ಫಗುಪ್ಚವನ್ನಿತ್ತು ಅಭಿವಂದಿಸಿದರು.

ಈ ಶುಭಾವಸರದಲ್ಲಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಜಿ.ಟಿ ಆಚಾರ್ಯ, ಉಷಾ ಜಿ.ಆಚಾರ್ಯ (ದಂಪತಿ), ಶ್ವೇತಾ ಪಿ.ಆಚಾರ್ಯ, ಪ್ರದೀಪ್ ಆಚಾರ್ಯ, ಮಾ| ಮಿಶಾಂತ್ ಪಿ.ಆಚಾರ್ಯ, ತ್ರಾಸಿ ಸುಧಾಕರ್ ಆಚಾರ್ಯ, ಸುಂದರ್ ಆಚಾರ್ಯ ಮೂಡಬಿದ್ರೆ, ಕೇಶವ ಆಚಾರ್ಯ ಮಂಗಳೂರು, ಅಭಿನಂದನಾ ಸಮಿತಿಯ ಉಪಾಧ್ಯಕ್ಷರುಗಳಾದ ಕೆ.ವಿ ಆಚಾರ್ಯ, ಕೆ.ಸುಂದರ್ ಆಚಾರ್ಯ, ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಗೌ| ಕೋಶಾಧಿಕಾರಿ ಎಸ್.ಕೆ ಸುಂದರ್, ಜೊತೆ ಕೋಶಾಧಿಕಾರಿ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಅಭಿನಂದನಾ ಗ್ರಂಥದ ಪ್ರದಾನ ಸಂಪಾದಕ ಹರಿದಾಸ ಅಂಬಾತನಯ ಮುದ್ರಾಡಿ, ಸದಸ್ಯರಾದ ಎ.ನರಸಿಂಹ, ನಿಟ್ಟೆ ದಾಮೋದರ ವಿ.ಆಚಾರ್ಯ, ಹಾಗೂ ಪ್ರಕಾಶ್ ಶೆಟ್ಟಿ ಸುರತ್ಕಲ್, ಅಶೋಕ್ ಶೆಟ್ಟಿಗಾರ್, ಅಶೋಕ್ ಸಸಿಹಿತ್ಲು, ಪ್ರಭಾಕರ್ ಬೆಳುವಾಯಿ, ಸುಧೀರ್ ಆಚಾರ್ಯ, ಚಿತ್ರಾಪು ಕೆ.ಎಂ ಕೋಟ್ಯಾನ್, ಕೆ.ಪಿ.ಚಂದ್ರಯ್ಯ ಆಚಾರ್ಯ, ಜನಾರ್ಧನ ಎಸ್.ಆಚಾರ್ಯ, ರಾಜು ಶ್ರೀಯಾನ್ ನಾವುಂದ, ಪ್ರೇಮನಾಥ ಸುವರ್ಣ, ಪ್ರಭಾಕರ್ ಆಚಾರ್ಯ ಸೇರಿದಂತೆ ಸಮಿತಿ ಸದಸ್ಯರನೇಕರು ಉಪಸ್ಥಿತರಿದ್ದರು.

ಗಣೇಶ್ ಎರ್ಮಾಳ್ ಪ್ರಾರ್ಥನೆಯನ್ನಾಡಿದರು. ಅಭಿನಂದನಾ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕೆ.ಗಣೇಶ್ ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಶ್ರೀಧರ್ ವಿ.ಆಚಾರ್ಯ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗೌ| ಕೋಶಾಧಿಕಾರಿ ಎಸ್.ಕೆ ಸುಂದರ್ ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *