ದೈವರಾಧನೆ ಎಲ್ಲರಿಗೂ ಒಲಿಯುವುದಿಲ್ಲ : ನಿತ್ಯಾನಂದ ಡಿ. ಕೋಟ್ಯಾನ್
ಮುಂಬಯಿ, : ಉಡುಪಿ ಜಿಲ್ಲೆಯ ಕಲ್ಯಾಣ್ಫುರ ತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ ಮುಂಬಯಿ ಉಪಸಮಿತಿಯ ಏಳನೇ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಅಸೋಸಿಯೇಶನ್‍ನ ಬಿಲ್ಲವರ ಭವನದ ಸಭಾಗೃಹದಲ್ಲಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು.

ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆ ನೆರವೇರಿಸಿ ಮಹಾಸಭೆಗೆ ಚಾಲನೆಯನ್ನಿತ್ತರು. ಜೊತೆ ಕಾರ್ಯದರ್ಶಿ ಕರುಣಾಕರ್ ಪೂಜಾರಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು.

Thonse Brama Baidarkala 7th AGM-1

Thonse Brama Baidarkala 7th AGM-2

ದೈವರಾಧನೆ ಎಲ್ಲರಿಗೂ ಒಲಿಯುವುದಿಲ್ಲ. ಇದಕ್ಕೆ ಧರ್ಮನಿಷ್ಠೆ ಅವಶ್ಯವಿದೆ. ಯಾವುದೇ ಕ್ಷೇತ್ರಗಳ ಪುನಃರ್ ನಿರ್ಮಾಣಕ್ಕೆ ಸಹೃದಯಿಗಳ ಸೇವೆ ಅಗತ್ಯವಿದೆ. ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸರ್ವರೂ ಇದರ ಯಶಸ್ಸಿಗೆ ಸಹಕರಿಸಬೇಕು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮನವಿ ಮಾಡಿದರು. ಅಂತೆಯೇ ಆಥಿರ್üಕ ಸಹಯೋಗದ ಅಗತ್ಯ ಇದ್ದೇ ಇರುತ್ತದೆ. ಆ ನಿಟ್ಟಿನಲ್ಲಿ ಧನ ಸಂಗ್ರಹಕ್ಕಾಗಿ ನಾವು ಸಾಂಸ್ಕೃತಿಕ

ಸಭೆಯಲ್ಲಿ ಸಮಿತಿಯ ಹಿರಿಯ ಸದÀಸ್ಯರುಗಳಾದ ಅಶೋಕ್ ಎಂ.ಕೋಟ್ಯಾನ್ ಥಾಣೆ, ವಿಠಲ್ ಪೂಜಾರಿ, ಸದಾನಂದ ಬಿ.ಪೂಜಾರಿ, ವಿಜಯ ಸನೀಲ್, ವಿಜಯ ಸನೀಲ್, ರೂಪ್‍ಕುಮಾರ್ ಕಲ್ಯಾಣ್ಪುರ್, ಶಿವಾನಂದ ಕೋಟ್ಯಾನ್, ಸುರೇಂದ್ರ ಪೂಜಾರಿ, ಶೇಖರ್ ಪೂಜಾರಿ, ಉದಯ ಎನ್.ಪೂಜಾರಿ, ರವಿ ಮೆಂಡನ್ ಕುರ್ಕಾಳ್, ವಿ.ಸಿ ಪೂಜಾರಿ ಹಾಜರಿದ್ದರು. ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ ಸುಖಾಗಮನ ಬಯಸಿ ಸಭಾ ಕಲಾಪ ನಡೆಸಿದರು. ಉಪಾಧ್ಯಕ್ಷ ವಿಶ್ವನಾಥ್ ತೋನ್ಸೆ ಕೃತಜ್ಞತೆ ಸಲ್ಲಿಸಿದÀರು.

By suddi9

Leave a Reply

Your email address will not be published. Required fields are marked *