ಗುರುಪುರ: ಹಳ್ಳಿ ಹಳ್ಳಿಗಳಲ್ಲಿ ಇಂತಹ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರವನ್ನು ಊರಿನ ಸಂಘ ಸಂಸ್ಥೆಗಳು ಆಯೋಜಿಸಿದರೆ ಆದ್ದರಿಂದ ಊರಿನ ನಾಗರಿಕರಿಗೆ ಮತ್ತು ವಯೋವೃದ್ದರಿಗೆ ಬಹಳ ಅನುಕೂಲವಾಗುತ್ತದೆ ಎಂದು ಗುರುಪುರ ಸತ್ಯದೇವತಾ ಮಂದಿರದ ಧರ್ಮದರ್ಶಿಗಳಾದ ಚಂದ್ರಕಾಂತ್ ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

1 (1)

2 (1)

3

4

5

6

7

8

9

10

11

ಅವರು ಅ.18 ರಣದು ಭಾನುವಾರ ಶ್ರೀ ಕೃಷ್ಣ ಮಿತ್ರ ಮಂಡಳಿ ಗುರುಪುರ ಹಾಗೂ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಗುರುಪುರ ಸತ್ಯದೇವತಾ ಸಭಾಗೃಹದಲ್ಲಿ ಉಚಿತ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ವಿ.ಹಿಂ.ಪ ಗುರುಪುರ ಪ್ರಖಂಡದ ಅಧ್ಯಕ್ಷರಾದ ವಿಷ್ಣು ಕಾಮತ್ ಮತಾನಾಡಿ ಬೇರೆ ಬೇರೆ ವೈದ್ಯಕೀಯ ತಪಾಸಣೆಯನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ಮಾಡುವ ಬದಲು ಒಂದೇ ಸ್ಥಳದಲ್ಲಿ ಉಚಿತವಾಗಿ ಎಲ್ಲಾ ತಪಾಸಣೆ ಮಾಡುವ ಅವಕಾಶವನ್ನು ಗುರುಪುರ ಶ್ರೀ ಕೃಷ್ಣ ಮಿತ್ರ ಮಂಡಳಿ ಅವರು ಮಾಡಿದ್ದಾರೆ. ಆದ್ದರಿಂದ ನಾಗರಿಕರಿಗೆ ಎಲ್ಲಾ ತರಹದ ವೈದ್ಯಕೀಯ ತಪಾಸಣೆ ಮಾಡಲು ಸಹಾಯವಾಗಿದೆ ಎಂದರು. ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ದಂತಚಿಕಿತ್ಸೆ, ನೇತ್ರ ತಪಾಸಣೆ, ಚರ್ಮರೋಗ ತಪಾಸಣೆ, ಜನರಲ್ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು. ನೂರಾರು ನಾಗರಿಕರು ಈ ಶಿಬಿರದ ಪ್ರಯೋಜನವನ್ನು ಪಡೆದರು.
ಸಭೆಯಲ್ಲಿ ಎ.ಜೆ ವೈದ್ಯಕೀಯ ಮಹಾವಿದ್ಯಾಲಯದ ಡಾ.ಪ್ರಣೀತ್, ಶ್ರೀಕರ್ ಶೆಟ್ಟಿ, ಶ್ರೀ ಕೃಷ್ಣ ಮಿತ್ರ ಮಂಡಳಿ ಗೌರವಧ್ಯಕ್ಷರಾದ ಹರೀಶ್ ಭಂಡಾರಿ, ಅಧ್ಯಕ್ಷ ಪ್ರವೀಣ್ ಸಾಲಿಯನ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರವನ್ನು ವಿನೋದ್ ಗುರುಪುರ ನಿರೂಪಿಸಿದರು

By suddi9

Leave a Reply

Your email address will not be published. Required fields are marked *