ಮುಂಬಯಿ:ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಸಂಸ್ಥೆಯ 2015- 18ನೇ ಸಾಲಿನ ನೂತನ ಕಾರ್ಯಾಧ್ಯಕ್ಷರಾಗಿ ಆ್ಯಂಟನಿ ಸಿಕ್ವೇರಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಿಸಿಸಿಐ ಮಾಸಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪ ಕಾರ್ಯಾಧ್ಯಕ್ಷರು ಗಳಾಗಿ ಜಾನ್ ಡಿ’ಸಿಲ್ವಾ, ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಮತ್ತು ಜಾನ್ ಮ್ಯಾಥ್ಯು,
ನಿರ್ದೇಶಕರುಗಳಾಗಿ ವಿನ್ಸೆಂಟ್ ಮಥಾಯಸ್, ಹೆನ್ರಿ ಲೋಬೊ, ಲಾರೇನ್ಸ್ ಕುವೆಲ್ಹೋ, ಜಾನ್ಸನ್ ಥೆರಟ್ಟಿಲ್, ಆಗ್ನೇಲ್ಲೋ ರಾಜೇಶ್ ಅಥೈಡೆ, ವಾಲ್ಟರ್ ಬುಥೆಲ್ಲೋ, ಗ್ರೆಗೋರಿ ಡಿ’ಸೋಜಾ, ನ್ಯಾ| ಪಿಯುಸ್ ವಾಜ್,
ವಿಶೇಷ ಆಮಂತ್ರಿತರಾಗಿ ಲಾರೇನ್ಸ್ ಡಿ’ಸೋಜಾ, ರಾಲ್ಫ್ ಪಿರೇರಾ, ಕಾರ್ಯನಿರತ ಕಾರ್ಯದರ್ಶಿ ಫೆಲಿಕ್ಸ್ ಡಿ’ಸೋಜಾ ಅವರನ್ನು ಆಯ್ಕೆ ನಡೆಸಲಾಗಿದೆ.
ಆ್ಯಂಟನಿ ಸಿಕ್ವೇರಾ
ವಾಲ್ಟರ್ .ಡಿ’ಸೋಜಾ
ಇದೇ ಅ.24ರ ಶನಿವಾರ ಸಂಜೆ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿಸಿಸಿಸಿಐ ಸಂಸ್ಥೆಯ 13ನೇ ವಾರ್ಷಿಕ ಮಹಾಸಭೆ, ಸ್ನೇಹ ಮಿಲನಮತ್ತು ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಚೆನ್ನಮಣೆನಿ ವಿದ್ಯಾಸಾಗರ್ ರಾವ್ ಹಾಗೂ ಅಮರಾವತಿ ಧರ್ಮ ಪ್ರಾಂತ್ಯದ ಬಿಷಪ್ ರೈ| ರೆ| ಎಲಿಯಸ್ ಗೋನ್ಸಾಲ್ವಿಸ್ ಆಗಮಿಸಲಿದ್ದಾರೆ. ಭವ್ಯ ಸಮಾರಂಭದಲ್ಲಿ ಅಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಪ್ರಾಯೋಜಕತ್ವದ ಯುವ ಉದ್ಯಮಿ ಸಾಧಕ ಪುರಸ್ಕಾರವನ್ನು ದಾಯ್ಜಿವರ್ಲ್ಡ್ ಡಾಟ್‍ಕಾಂನ ಪ್ರಧಾನ ಸಂಪದಕ ವಾಲ್ಟರ್ ನಂದಳಿಕೆ ಅವರಿಗೆ ಪ್ರದಾನಿಸಲಾಗುವುದು ಹಾಗೂ ಇದೇ ಸಂದರ್ಭದಲ್ಲಿ ನೂತನ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅವರಿಗೆ ಕಾರ್ಯಾಧ್ಯಕ್ಷತಾ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ಸಿಸಿಸಿಐ ಪದಾಧಿಕಾರಿಗಳು ತಿಳಿಸಿದ್ದಾರೆ.

