ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೊಯಿಲ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶಾರದೋತ್ಸವ ಸಮಿತಿ ವತಿಯಿಂದ ಬುಧವಾರ ಆರಂಭಗೊಂಡ 13ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿ ಸ್ವರ್ಣೋದ್ಯಮಿ ಶಿವಾಜಿ ಜಾದವ್ ಧ್ವಜಾರೋಹಣ ನೆರವೇರಿಸಿದರು.
ಲಯನ್ಸ್ ಕ್ಲಬ್ಬಿನ ಪ್ರಾಂತೀಯ ಅಧ್ಯಕ್ಷ ಬಿ.ಎಂ.ದಾಮೋದರ, ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ ಶೆಟ್ಟಿ, ಸಮಿತಿ ಅಧ್ಯಕ್ಷ ಜಯಂತ ಪೂಜಾರಿ, ವಸಂತ ಕುಮಾರ್ ಅಣ್ಣಳಿಕೆ, ಡೊಂಬಯ ಅರಳ, ಸಂತೋಷ್ ಕುಮಾರ್ ಬೆಟ್ಟು ಮತ್ತಿತರರು ಇದ್ದರು.
