ಮೂಡುಬಿದರೆ: ಕೃಷಿ ವಿಚಾರ ವಿನಿಮಯ ಕೇಂದ್ರ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವುಗಳ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ, ಕರ್ನಾಟಕ ರಾಜ್ಯ ರೈತ ಸಂಘ ಮೂಡುಬಿದರೆ ವಲಯ ಸಹಕಾರದೊಂದಿಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ನಡೆದ ವೈಜ್ಞಾನಿಕ ಹೈನೋದ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿದರು.
ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಸಂವಾದವನ್ನು ಉದ್ಘಾಟಿಸಿ, ರೈತರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಕೊಳ್ಳಬೇಕು. ಸರಕಾರವು ಕೃಷಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳಲ್ಲಿ ಸಾಲವನ್ನು ನೀಡುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಹೊರತು ಮೀಟರು ಬಡ್ಡಿಗೆ ಬಲಿಯಾಗದಿರಿ ಎಂದು ಮೀನುಗಾರಿಕೆ ಎಂದುಹೇಳಿದರು.
mbd_nov7_3
ಮಂಗಳೂರು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸನ್ಮಾನ: ಹೈನೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಂದಿನಿ ಬಂಗೇರಾ ಪಡುಕೊಣಾಜೆ ಮತ್ತು ಕರಿಂಜೆ ಗಾಂದೊಟ್ಟುವಿನ ಭಾಸ್ಕರ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಪಶು ವೈದ್ಯಾಧಿಕಾರಿ ಜಗನ್ನಾಥ ಶೆಟ್ಟಿ, ಶ್ರೀ ಕ್ಷೇ. ಧ.ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೃಷ್ಣ ಕೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಕೃಷಿಕ ಶಿರ್ತಾಡಿ ಸಂಪತ್ ಸಾಮ್ರಾಜ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂಡುಬಿದರೆ ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜಮರ್ವ ಬೈಲಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕೃಷಿ ಅಧಿಕಾರಿ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಘುರಾಮ ಶೆಟ್ಟಿ ವಂದಿಸಿದರು.
ಶ್ರದ್ಧಾಂಜಲಿ : ಇತ್ತೀಚೆಗೆ ನಿಧನರಾಗಿರುವ ಪ್ರಗತಿಪರ ಕೃಷಿಕ ಮಿಜಾರು ದಿ.ಜೀವಂದರ್ ಕುಮಾರ್ ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ನಂತರ ಸಂವಾದ ಕಾರ್ಯಕ್ರಮದಲ್ಲಿ ತಜ್ಞರಾದ ನಿತ್ಯಾನಂದ ಭಕ್ತ ಅವರು ಹೈನುಗಾರರ ಅಭ್ಯುದಯ ಸರಕಾರ ಮತ್ತು ಒಕ್ಕೂಟದ ಪಾತ್ರ, ಬೆಳ್ತಂಗಡಿ ಕೆ.ಎಮ್.ಎಫ್ ಶಿಬಿರ ಕಛೇರಿಯ ಪಶು ವೈದ್ಯರಾದ ಡಾ.ದಿನೇಶ್ ಸರಳಾಯ ಅವರು ಲಾಭದಾಯಕ ಹೈನುಗಾರಿಕೆ ಹಾಗೂ ಪುತ್ತೂರಿನ ಕೃಷ್ಣ ಮೋಹನ್ ಪಿ.ಯಸ್. ಯಂತ್ರೋಪಕರಣದಲ್ಲಿ ಆಧುನಿಕ ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು.
ಸಿಎಂಗೆ ಮನವಿ ಕರ್ನಾಟಕ ಸರ್ಕಾರವು ಬತ್ತದ ಬೆಳೆಗೆ ಕೇರಳ ಮಾದರಿಯಲ್ಲಿ ಸಹಾಯಧನ ನೀಡಬೇಕು, ಹಾಲಿಗೆ ಬೆಂಬಲ ಬೆಲೆ ಮತ್ತು ಗುಣಮಟ್ಟದ ಬೂಸಾ, ಇಂಜೆಕ್ಸನ್, ಎಲ್ಲಾ ಪಶುಗಳಿಗೆ ಪಶು ವಿಮೆ ಹಾಗೂ ಗ್ರಾಮಗಳಲ್ಲಿ ಹಾಪ್‍ಕಾಮ್ಸ್ ಮತ್ತು ತತ್ಸಮಾನ ವ್ಯವಸ್ಥೆಯನ್ನು ರೈತರಿಗೆ ಒದಗಿಸಿಕೊಡುವಂತೆ ಸಚಿವ ಅಭಯಚಂದ್ರರ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜಮರ್ವ ಬೈಲಂಗಡಿ ಅವರು ಮನವಿಯನ್ನು ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *