ಮೂಡುಬಿದರೆ: ಕನ್ನಡ ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2015’ ನವೆಂಬರ್ 26ರಿಂದ 29ರವರೆಗೆ ಮೂಡುಬಿದರೆ
ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣ ಜರಗಲಿದೆ. ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ, ಶಿಕ್ಷಕರಿಗೆ ಮತ್ತು ಸಾಹಿತ್ಯಾಸಕ್ತರಿಗೆ 100/- ರೂ. ಪ್ರತಿನಿಧಿ ಶುಲ್ಕದ ಮೂಲಕ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ನೋಂದಣಿಯು ನೇರವಾಗಿ ಇಲ್ಲವೇ ಆನ್‍ಲೈನ್ ಮೂಲಕ ಮಾಡಬಹುದಾಗಿದೆ. ನೇರ ನೊಂದಣಿ ಬಯಸುವವರು ಡಾ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದರೆ -574227 ವಿಳಾಸಕ್ಕೆ ಅರ್ಜಿ ಕಳುಹಿಸುವುದು. ಆನ್‍ಲೈನ್‍ನಲ್ಲಿ ನೋಂದಣಿ ಮಾಡಬಯಸುವವರು  www.alvasnudusiri.com <http://www.alvasnudusiri.com>ಸಮರ್ಪಕ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬಹುದು.

By suddi9

Leave a Reply

Your email address will not be published. Required fields are marked *