ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ವತಿಯಿಂದ ಇ.ಆರ್.ಡಬ್ಲ್ಯೂ.ಸಿ ಯೋಜನೆ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸಂಘದ ಮಹಿಳೆಯರ ಸ್ವ ಉದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವು ಗುರುಪುರ ಪಂಚಾಯತ್ ಹಾಲ್‍ನಲ್ಲಿ ಜರುಗಿತು.
1

2

3

4

5

6

7

8

9

10

11ಹಳ್ಳಿಗಳಲ್ಲಿ ವಾಸವಾಗಿರುವ ಮಹಿಳೆಯರು, ಮನೆಯಲ್ಲಿ ಕುಳಿತುಕೊಂಡು ಸ್ವ ಉದ್ಯೋಗವನ್ನು ಮಾಡಿ ಅದರಲ್ಲಿ ಲಾಭಾದಾಯಕವಾಗಿಸಲು ತೊಡಗಿಸಿಕೊಳ್ಳಬೇಕು ಹಾಗೇ ಎಲ್ಲ ಮಹಿಳೆಯರು ಸಂಘಗಳ ಮೂಲಕ ಒಟ್ಟಿಗೆ ಬೆರೆತು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಇ.ಆರ್.ಡಬ್ಲ್ಯೂ.ಸಿ ಯೋಜನೆಯ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ತಿಳಿ ಹೇಳಿದರು.
ಕೈಕಂಬ ವಲಯದಿಂದ 35ಕ್ಕಿಂತ ಹೆಚ್ಚು ಸಂಘಗಳ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ವ ಉದ್ಯೋಗ ಹೊಂದಿರುವಂತಹ ಸಂಘದ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ವ ಉದ್ಯೋಗ ಹೊಂದಿರುವಂತಹ ಅಭ್ಯರ್ಥಿಗಳು ತಮ್ಮ ಉದ್ಯೋಗದ ಮಾದರಿ ಮತ್ತು ವ್ಯವಹಾರ , ವ್ಯಾಪಾರ ಅದಾಯ ಉತ್ಪನ್ನಗಳ ಬಗ್ಗೆ ವಿವರಿಸಿ ಹೇಳಿದರು. ಉತ್ತಮ ರೀತಿಯಲ್ಲಿ ವಿವರಣೆ, ಪ್ರಾತ್ಯಕ್ಷಿಕೆ ತೋರಿಸಿದಂತಹ ಅಭ್ಯರ್ಥಿಗಳಿಗೆ ಬಹುಮಾನ ಕೊಡಲಾಯಿತು. ಹಾಗೇಯೇ ಉತ್ತಮ ರೀತಿಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ 6 ಮಂದಿಯನ್ನು ವಲಯ ಮಟ್ಟದ ಸ್ವ ಉದ್ಯೋಗ ಸ್ಪರ್ದೆಗೆ ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರೇಷ್ಮಾ ಇ.ಆರ್.ಡಬ್ಲ್ಯೂ.ಸಿ ಯೋಜನೆಯ ಮೇಲ್ವಿಚಾರಕಿ ಉಪಸ್ಥಿತರಿದ್ದರು ಮತ್ತು ವಲಯ ಸಂಯೋಜಕರಾದ ಸಾತ್ವಿಕ್ ಮತ್ತು ವಲಯ ಕಾರ್ಯಕರ್ತೆಯರಾದ ಪಾಲಾಕ್ಷಿ, ಸೀತಾಲಕ್ಷ್ಮೀ ಉಪಸ್ಥಿತರಿದ್ದರು.
ಮಲ್ಲಿಕಾ ಅವರು ಸ್ವಾಗತಿಸಿ, ಸವಿತ ವಂದಿಸಿದರು. ಶೋಭಾ ಸಂಘದ ವರದಿ ಮಂಡಿಸಿದರು.

By suddi9

Leave a Reply

Your email address will not be published. Required fields are marked *