ಕೈಕಂಬ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮ ಪಂಚಾಯತ್‍ನ ನಿರ್ಣಯ ಪುಸ್ತಕ ಬುಧವಾರ ಕಳವು ಆಗಿರುವ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರ ಉಪಸ್ಥಿತಿಯಲ್ಲಿ ಗ್ರಾಮಸ್ಥರು ಪಂಚಾಯತ್ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
12vm kariyangala panchayath (1)ಪ್ರಕರಣದ ಹಿನ್ನಲೆ:
ಕರಿಯಂಗಳ ಗ್ರಾ.ಪಂ.ವ್ಯಾಪ್ತಿಯ ಕಲ್ಲಗುಡ್ಡೆ ಎಂಬಲ್ಲಿ ನೂತನ ಬಸ್‍ಸ್ಟಾಂಡ್‍ನ್ನು ಖಾಸಗಿಯವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿ ಬಳಿಕ ಹಳೆಯ ಬಸ್‍ಸ್ಟಾಂಡ್‍ನ್ನು ತೆರವುಗೊಳಿಸುವ ಬಗ್ಗೆ ಕರಿಯಂಗಳ ಗ್ರಾ.ಪ.ನಲ್ಲಿ ಇತ್ತೀಚಿಗೆ ನಿರ್ಣಯ ಅಂಗೀಕರಿಸಲಾಗಿತ್ತು. ಈ ಬೆಳವಣಿಗೆ ಬಡಗ ಬೆಳ್ಳೂರು ಗ್ರಾ.ಪಂ ಕಡೆಯಿಂದ ಅಕ್ಷೇಪಣೆ ವ್ಯಕ್ತವಾಗಿತ್ತು. ನೂತನ ಬಸ್‍ಸ್ಟಾಂಡ್ ನಿರ್ಮಾಣ ಕಾರ್ಯ ಪೂರ್ಣಗೊಂಡ ತಕ್ಷಣ ಸೋಮವಾರ (ನ.9) ಕರಿಯಂಗಳ ಗ್ರಾ.ಪಂನವರು ಹಳೆಯ ಬಸ್‍ಸ್ಟಾಂಡ್‍ನ್ನು ಪೊಲೀಸರ ಉಪಸ್ಥಿತಿಯಲ್ಲಿ ತೆರವುಗೊಳಿಸಿದ್ದರು. ಅದೇ ದಿನ ರಾತ್ರೋರಾತ್ರಿ ಬಡಗ ಬೆಳ್ಳೂರು ಗ್ರಾ.ಪಂ ಸದಸ್ಯರ ಉಪಸ್ಥಿತಿಯಲ್ಲಿ ತೆರವುಗೊಳಿಸಿದ ಬಸ್‍ಸ್ಟಾಂಡ್ ಜಾಗದಲ್ಲೇ ಬಸ್‍ಸ್ಟಾಂಡ್ ಮರು ನಿರ್ಮಾಣಗೊಂಡಿತ್ತು.
ಬುಧವಾರ ಬೆಳಿಗ್ಗೆ ಪೊಳಲಿ ದ್ವಾರದ ಬಳಿ ಇರುವ ಕರಿಯಂಗಳ ಗ್ರಾ.ಪಂ.ಕಛೇರಿಯಿಂದ ಪಂಚಾಯತ್‍ನ ನಿರ್ಣಯ ಪುಸ್ತಕ ಕಾಣೆಯಾಗಿತ್ತು. ಇದನ್ನು ತಿಳಿದ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಅವರ ಉಪಸ್ಥಿತಿಯಲ್ಲಿ ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ್ ಮತ್ತಿತರರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದರು
ನಿರ್ಣಯ ಪುಸ್ತಕ ದಿಢೀರ್ ಪ್ರತ್ಯಕ್ಷ:
ನಿರ್ಣಯ ಪುಸ್ತಕ ನಾಪತ್ತೆಯಾದ ಬಳಿಕ ಪ್ರಭಾರ ಪಂಚಾಯತಿ ಅಭಿವೃದ್ಧಿ ಅಕಾರಿ ಯಾವುದೇ ದೂರವಾಣಿ ಕರೆಗಳಿಗೂ ಸಿಗದೆ ಹಲವು ಸಂಶಯಗಳಿಗೆ ಕಾರಣವಾಗಿತ್ತು. ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪಂಚಾಯತಿ ಗುಮಸ್ತ ಅಕ್ಷಯ್ ನಿರ್ಣಯ ಪುಸ್ತಕ ಜತೆ ಆಗಮಿಸಿದಾಗ ತಾ.ಪಂ.ಅಧ್ಯಕ್ಷ, ಪೊಲೀಸರು ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಆತನನ್ನು ವಿಚಾರಣೆ ನಡೆಸಿದರು.
ಪ್ರಭಾರ ಪಿಡಿಓ ಅವರ ಆದೇಶದಂತೆ ಕೊಂಡೊಯ್ದಿರುವುದಾಗಿ ತಿಳಿದು ಬಂದಿದ್ದು ಬಸ್‍ಸ್ಟಾಂಡ್‍ಗೆ ಸಂಬಂಸಿದಂತೆ ನಿರ್ಣಯದ ಹಿನ್ನೆಲೆಯಲ್ಲಿ ನಿರ್ಣಯ ಪುಸ್ತಕ ಕಳವುಗೈದಿರುವ ಬಗ್ಗೆ ಶಂಕಿಸಲಾಗಿದೆ.

ಈ ಮಧ್ಯೆ ಕಲ್ಲಗುಡ್ಡೆ ಎಂಬಲ್ಲಿನ ಹಳೆಯ ಹಾಗೂ ಹೊಸ ಬಸ್‍ಸ್ಟಾಂಡ್‍ಗಳೆರಡೂ ಕರಿಯಂಗಳ ಗ್ರಾ.ಪಂ ವ್ಯಾಪ್ತಿಯಲ್ಲೇ ಇದ್ದರೂ ಬಡಗ ಬೆಳ್ಳೂರು ಗ್ರಾ.ಪಂನವರು ರಾಜಕೀಯ ಹುನ್ನಾರದಿಂದ ಈ ಅಕ್ರಮ ಕೃತ್ಯ ಎಸಗಿದ್ದಾರೆ ಎಂದು ಕರಿಯಂಗಳ ಗ್ರಾ.ಪಂ ಸದಸ್ಯರು ದೂರಿದ್ದಾರೆ.

By suddi9

Leave a Reply

Your email address will not be published. Required fields are marked *