ಬಂಟ್ವಾಳ: ಅರಣ್ಯ ಇಲಾಖೆಯ ಮೂಲಕ ಶ್ರೀ ಕ್ಷೇತ್ರ ಕಾರಿಂಜಕ್ಕೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ನೇಚರ್ ಕ್ಯಾಂಪ್ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಮಂಗಳವಾರ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ತಾಲೂಕು ಪಂಚಾಯತ್ ಬಂಟ್ವಾಳ ಕಂದಾಯ ಇಲಾಖೆ ವತಿಯಿಂದ ಕಾವಳಮೂಡೂರು,ಕಾವಳಪಡೂರು,ಪಿಲಾತಬೆಟ್ಟು,ಬಡಗಕಜೆಕಾರು,ಇರ್ವತ್ತೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಸ್ಥರಿಗೆ ವಸತಿ ಯೋಜನೆಗಳ ಕಾಮಗಾರಿ ಆದೇಶ ಮತ್ತು 94 ಸಿ ಹಕ್ಕು ಪತ್ರ ಸಹಿತ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.

3

2

1ಅಡಳಿತ ವ್ಯವಸ್ಥೆಯ ಸುಧಾರಣೆಗೆ ರಾಜ್ಯ ಸರಕಾರ ಹೊಸ ಗ್ರಾಮ ಪಂಚಾಯತ್‍ಗಳನ್ನು ರಚಿಸಿದ್ದು ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾಮ ಪಂಚಾಯತ್‍ಗಳು ರಚನೆಯಾಗಿದೆ ಎಂದ ಅವರು ಬಡವರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಸರಕಾರದ ಇಚ್ಚಾಶಕ್ತಿಯಿಂದ ಸಾಧ್ಯವಾಗಿದ್ದು ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

ಜನತೆಗೆ ಶುದ್ಧ ನೀರು ಪೂರೈಕೆಯ ಮಹತ್ವಾಕಾಂಕ್ಷೆಯ 36 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದ ಅವರು 32 ಕೋ.ರೂ.ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಬಹು ಬೇಡಿಕೆಯ ಅಜಿಲಮೊಗರು-ಕಡೆಶ್ವಾಲ್ಯ ಸಂಪರ್ಕ ಸೇತುವೆಗೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಮಂಜೂರಾತಿ ಹಂತದಲ್ಲಿದೆ .ಇದರ ಅನುಷ್ಟಾನದಿಂದ ಬಲಯೂರು,ಅಮೈ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸುಲಭÀ ಸಾಧ್ಯವಾಗಲ್ಲಿದೆ ಎಂದರು.
ವಗ್ಗ-ಕಾರಿಂಜ ರಸ್ತೆ ಅಭಿವೃದ್ಧಿಗೆ ಈಗಾಗಲೇ 2.60 ಕೋ.ರೂ ಮಂಜೂರಾತಿಗೊಂಡಿದ್ದು ಕಾರಿಂಜೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ..ವಗ್ಗ-ಉಳಿ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ.ಮಂಜೂರಾತಿಗೊಂಡಿದ್ದು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ.ಉಳಿ-ಬಡಗ ಕಜೆಕಾರು ರಸ್ತೆ ಹಾಗೂ ನಾವೂರ ಸರಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣಗೊಂಡಿದೆ .ಕಟ್ಟದಪಡ್ಪು-ನರ್ಸಿಕುಮೇರು ಜಿಲ್ಲಾ ಪಂಚಾಯತ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಒಂದು ಬಾರಿ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಸಂಪೂರ್ಣ ಡಾಮರೀಕರಣಗೊಳಿಸಲಾಗಿವುದು ಎಂದರು.
ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್,ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ,ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಕಾವಳಮೂಡೂರು ಗ್ರಾ.ಪಂ ಅಧ್ಯಕ್ಷ ಸಂತೋಷ್ ಪೂಂಜಾ,ಮಾಜಿ ಅಧ್ಯಕ್ಷ ಯಾಕೂಬ್ ಸಾಹೇಬ್,ಪಿಲಾತ ಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ,ಬಡಗ ಕಜೆಕಾರು ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ,ತುಂಬೆ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಜಶೇಖರ ರೈ,ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷ ಸುಜಾತ ಪ್ರಕಾಶ್,ಉಪಾದ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್,ಕಾವಳಪಡೂರು ಗ್ರಾ.ಪಂ.ಸದಸ್ಯರಾದ ಪಿ.ಜಿನರಾಜ ಆರಿಗ,ಚಂದ್ರಶೇಖರ ಕರ್ಣ,ಕಾವಳಮೂಡೂರು ಗ್ರಾ.ಪಂ.ಸದಸ್ಯರಾದ ಇಸ್ಮಾಯಿಲ್ ಸಿದ್ದಿಕ್, ವೇದಿಕೆಯಲ್ಲಿದ್ದರು.ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಕರಣಿಕರು,ಗ್ರಾ.ಪಂ.ಸದಸ್ಯರು ಸಿಬಂದಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವರು ಅಡಿಕೆ ಕೊಳೆರೋಗದ ಪರಿಹಾರ ಚೆಕ್,ಅಂಗವಿಕಲ ವೇತನ,ಸಂಧ್ಯಾ,ಸುರಕ್ಷಾ,ವೃದ್ಯಾಪ್ಯವೇತನ,ಮನಸ್ವಿನಿ,ವಿಧವಾ ವೇತನ ಮಂಜುರಾತಿ ಪತ್ರ ಮೊದಲಾದವುಗಳ ವಿತರಿಸಿದರು.ಒಟ್ಟು 151 ಮಂದಿ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಯಿತು.
ಕಾವಳಮೂಡೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೇದವ ಅವರು ಸ್ವಾಗತಿಸಿದರು.ಜಯರಾಮ ನಾಯ್ಕ್ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತಾಲೂಕಿನ ವಾಮದಪದವು ಕರಿಮಲೆ ಸಭಾಂಗಣದಲ್ಲಿ ಚೆನ್ನೈತ್ತೋಡಿ, ಕುಕ್ಕಿಪಾಡಿ, ಸಂಗಬೆಟ್ಟು ,ರಾಯಿ, ಅರಳ, ಪಂಜಿಕಲ್ಲು ಗ್ರಾ.ಪಂ.ವ್ಯಾಪ್ತಿಯ ಗ್ರಾಮಸ್ಥರಿಗೆ ವಸತಿ ಯೋಜನೆಗಳ ಕಾಮಗಾರಿ ಆದೇಶ ಮತ್ತು 94 ಸಿ ಹಕ್ಕು ಪತ್ರ ಸಹಿತ ವಿವಿಧ ಸೌಲಭ್ಯಗಳನ್ನು ಸಚಿವ ರಮಾನಾಥ ರೈ ವಿತರಿಸಿದರು.
ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ.ಸದಸ್ಯ ಬಿ. ಪದ್ಮಶೇಖರ ಜೈನ್, ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ, ಕಂದಾಯ ನಿರೀಕ್ಷಕ ಆಸಿಫ್ ಇಸ್ಮಾಯಿಲ್, ನಿವೃತ್ತ ತಹಶೀಲ್ದಾರ್ ರಘುಪತಿ ಶಾಸ್ತ್ರಿ ವೇದಿಕೆಯಲ್ಲಿದ್ದರು.ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಕರಣಿಕರು,ಗ್ರಾ.ಪಂ.ಸದಸ್ಯರು ಸಿಬಂದಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವರು ಅಡಿಕೆ ಕೊಳೆರೋಗದ ಪರಿಹಾರ ಚೆಕ್,ಅಂಗವಿಕಲ ವೇತನ,ಸಂಧ್ಯಾ,ಸುರಕ್ಷಾ,ವೃದ್ಯಾಪ್ಯವೇತನ,ಮನಸ್ವಿನಿ,ವಿಧವಾ ವೇತನ ಮಂಜುರಾತಿ ಪತ್ರ ಮೊದಲಾದವುಗಳ ವಿತರಿಸಿದರು.ಇದೇ ವೇಳೆ ಸಚಿವರು ಅಡಿಕೆ ಕೊಳೆರೋಗದ ಪರಿಹಾರ ಚೆಕ್,ಅಂಗವಿಕಲ ವೇತನ,ಸಂಧ್ಯಾ,ಸುರಕ್ಷಾ,ವೃದ್ಯಾಪ್ಯವೇತನ,ಮನಸ್ವಿನಿ,ವಿಧವಾ ವೇತನ ಮಂಜುರಾತಿ ಪತ್ರ ಮೊದಲಾದವುಗಳ ವಿತರಿಸಿದರು.ಒಟ್ಟು 151 ಮಂದಿ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಯಿತು.


By suddi9

Leave a Reply

Your email address will not be published. Required fields are marked *