ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ಗೇಟ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ರೌಡಿಶೀಟರ್ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಾಂತಿಅಂಗಡಿ ನಿವಾಸಿಗಳಾದ ಹಸೈನಾರ್ ಹಾಗೂ ಸಮೀರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಬ್ಬರ ಮೇಲೆ ನಗರ ಠಾಣೆಯಲ್ಲಿ ರೌಡಿಶೀಟರ್ ಪ್ರಕರಣ ದಾಖಲಾಗಿದ್ದು ಖತರ್ನಾಕ್ ನಡೆಯುಳ್ಳವರಾಗಿದ್ದಾರೆ.
ಈ ಪೈಕಿ ಆರೋಪಿ ಹಸೈನಾರ್ ವಿರುದ್ಧ ಮೆಸ್ಕಾಂನ ಇಂಜಿನಿಯರ್ ಒಬ್ಬರಿಗೆ ಹೊಡೆದ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈತನ ವಿರುದ್ಧ 8 ಕೇಸ್ ಗಳಿದ್ದು, ಪೊಲೀಸರು ರೌಡಿಶೀಟರ್ ತೆರೆದಿದ್ದರು.
ಇನ್ನೊಬ್ಬ ಆರೋಪಿ ಸಮೀರ್ ಎಂಬಾತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪೊಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡಿದ್ದ. ಈತ ತಪ್ಪಿಸಿಕೊಂಡಿದ್ದರಿಂದ ಬಂಟ್ವಾಳ ಠಾಣೆಯ ಇನ್ಸ್ಪೆಕ್ಟರ್ ರಾಜಶೇಖರ್ ಮೇಸ್ತ್ರಿ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ಈತನ ಮೇಲೆ ಮೂರು ಬಾಡಿವಾರಂಟ್ ಇದ್ದು ಈತನ ಮೇಲೂ ರೌಡಿಶೀಟರ್ ತೆರೆಯಲಾಗಿತ್ತು.

 

By suddi9

Leave a Reply

Your email address will not be published. Required fields are marked *