ಬಂಟ್ವಾಳ; ಸತ್ತ ಕೋಳಿಗಳನ್ನು ಹಾಗೂ ಕೋಳಿ ತ್ಯಾಜ್ಯಗಳನ್ನು ರಸ್ತೆಯಲ್ಲೇ ಎಸೆದ ದುಷ್ಕರ್ಮಿಗಳ ತಂಡವೊಂದು ಪರಿಸರ ಮಾಲಿನ್ಯ ಗೈದ ಘಟನೆ ಬಿ.ಸಿ.ರೋಡು -ಕಡೂರು ರಾಹೆ.234 ರಲ್ಲಿ ನಡೆದಿದೆ.

1 (4)
ಭಾನುವಾರ ರಾತ್ರಿ ವಾಹನಗಳಲ್ಲಿ ಬಂದ ತಂಡವೊಂದು ಈ ಕೃತ್ಯ ವೆಸಗಿದ್ದು ತ್ಯಾಜ್ಯದಿಂದಾಗಿ ಮಣಿಹಳ್ಳ ದಿಂದ ಮೊದಲ್ಗೊಂಡು ಪೂಂಜಾಲಕಟ್ಟೆ,ಮಡಂತ್ಯಾರು ವರೆಗಿನ ಹೆದ್ದಾರಿ ಸೋಮವಾರ ಗಬ್ಬುನಾಥ ಬೀರುತ್ತಿತ್ತು. ಮಣಿಹಳ್ಳ, ಅಂಚಿಕಟ್ಟೆ, ವಗ್ಗ, ಪೂಂಜಾಲಕಟ್ಟೆ, ಹಾಗೂ ಮಡಂತ್ಯಾರುವಿನ ಕೆಲ ಪ್ರದೇಶಗಳಲ್ಲಂತೂ ತೆರೆದ ಗೋಣಿಗಳಲ್ಲಿ ತುಂಬಿಸಿ ಕೋಳಿತ್ಯಾಜ್ಯಗಳನ್ನು ಎಸೆಯಲಾಗಿತ್ತು. ರಸ್ತೆ ಮಧ್ಯದಲ್ಲೇ ತ್ಯಾಜ್ಯ ಎಸೆದ ಕಾರಣದಿಂದ ಅದು ರಸ್ತೆಯಿಡೀ ಹರಡಿದ ಕಾರಣದಿಂದ ಸದ್ರಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಮೂಗುಮುಚ್ಚಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಹೆದ್ದಾರಿಯ ಅಕ್ಕಪಕ್ಕದ ನಿವಾಸಿಗಳೂ ಕೂಡ ಈ ಪರಿಸರ ಮಾಲಿನ್ಯದ ಬಗ್ಗೆ ಆಕ್ರೋಸ ವ್ಯಕ್ತಪಡಿಸಿದ್ದು, ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ

By suddi9

Leave a Reply

Your email address will not be published. Required fields are marked *