ಬಂಟ್ವಾಳ:ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ವಿನಯಶೀಲತೆ ಮತ್ತು ಕ್ರಿಯಾಶೀಲ ಮನೋಭಾವ ಬೆಳೆಸಬೇಕು.
ಆ ಮೂಲಕ ಸರ್ಕಾರಿ ಶಾಲೆಯಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರ ಬಂದು ಸಾಧನಾಶೀಲ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಪುಂಜಾಲಕಟ್ಟೆ ಸರ್ಕಾರಿ ಪ್ಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಹೇಳಿದ್ದಾರೆ.
ತಾಲ್ಲೂಕಿನ ಕೊಯಿಲ ಸರ್ಕಾರಿ ಪೌಢಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾದ್ಯಕ್ಷ ದೇವಪ್ಪ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ ವಿವಿಧ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ ಕೊಯಿಲ, ರಾಘವ ಅಮೀನ್, ಶೋಭಾ, ಕುಸುಮ, ಸಂಪನ್ಮೂಲ ವ್ಯಕ್ತಿ ವೇದಾನಂದ ಕಾರಂತ, ಪ್ರಮುಖರಾದ ಜಿ.ರಾಮಸುಂದರ ಗೌಡ, ಶ್ರೀಧರ ಅಣ್ಣಳಿಕೆ, ಎ.ರಾಮಣ್ಣ ರೈ ಮಾವಂತೂರು, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ರಾಜೇಶ ಜೈನ್ ಪಡ್ರಾಯಿ, ಖಾಲಿದ್ ಅರಳ, ಚಂದ್ರಶೇಖರ, ದಿನೇಶ ಸುವರ್ಣ, ಜೈಸನ್ ಲೋಬೊ, ಶಾಂತಾ ನಾಗರಾಜ ಭಟ್ ಮತ್ತಿತರರು ಶುಭ ಹಾರೈಸಿದರು.
ಶಿಕ್ಷಕ ಶ್ರೀಶ ಭಟ್ ಸ್ವಾಗತಿಸಿ, ಮುಖ್ಯಶಿಕ್ಷಕ ಸುಧೀರ್ ಬಿ. ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ರಮೇಶ ಮಯ್ಯ ವಂದಿಸಿ, ಮಹೇಶ ಕರ್ಕೇರ ನಿರೂಪಿಸಿದರು.