ಬಂಟ್ವಾಳ: ಬಂಟ್ವಾಳ ಪುಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ 94ಸಿಸಿ ಅಕ್ರಮ -ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದಾಗಿ ಅರ್ಹ ಫಲಾನುಭವಿಗಳು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ಮೂರು ಕಿ.ಮೀ. ಮತ್ತು ಮಹಾನಗರಪಾಲಿಕೆಗಿಂತ 10ಕಿ.ಮೀ.ಅಂತರದಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದಲ್ಲಿ ಅಂತಹ ಜಮೀನು ಸಕ್ರಮಗೊಳಿಸಲಾಗುತ್ತದೆ. ಇದಕ್ಕಾಗಿ ಮನೆ ತೆರಿಗೆ ರಶೀದಿ, ವಿದ್ಯುತ್ಬಿಲ್ಲು, ಮನೆ ಕಟ್ಟಡ ಛಾಯಾಚಿತ್ರ, ನಿವೇಶನ ನಕ್ಷೆ ಸಹಿತ ರೂ 50 ಪಾವತಿಸಿ ಆಯಾಯ ಹೋಬಳಿ ಮಟ್ಟದ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವಂತೆ ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.