ಕೈಕಂಬ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸವಿತಾ ಸಮಾಜ ಸಂಘಟನೆಯ ಸಂಸ್ಥಾಪಕರಾಗಿದ್ದ ದಿ.ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಸಮಾಜದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಗುರುಪುರ ಕೈಕಂಬದ ಪ್ರೀಮಿಯರ್ ಸಭಾಂಗಣದಲ್ಲಿ ಡಿ.8 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

111
ದ.ಕ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದಿನೇಶ್ ಎಲ್.ಬಂಗೇರ ಅಧ್ಯಕ್ಷತೆ ವಹಿಸುವರು. ಸಮಾಜದ ಹಿರಿಯ ಕಾರ್ಯಕರ್ತ ತಪ್ಪ ಭಂಡಾರಿ ಬಜಪೆ ಹಾಗೂ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕøತ ಸಾಂಪ್ರದಾಯಿಕ ಪ್ರಸೂತಿ ತಜ್ಞೆ ಮುತ್ತು ಸುವರ್ಣ ಅವರಿಗೆ ಈ ಸಂದರ್ಭ ದಿ.ವಿಠಲ ಭಂಡಾರಿ ಕುಳಾಯಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬಂಟ್ವಾಳ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಬಿ.ಸಿ.ರೋಡ್ ಇದರ ಉಪಾಧ್ಯಕ್ಷ, ಉಪನ್ಯಾಸಕ ಸುರೇಶ್ ನಂದೊಟ್ಟು ಅವರು ಸಂಸ್ಮರಣಾ ನುಡಿ ನಮನ ಮಾಡುವರು. ಬಿ.ಸಿ.ರೋಡ್ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ಅಧ್ಯಕ್ಷತೆ ವಹಿಸುವರು.
ಸವಿತಾ ಸಮಾಜದ ನಾನಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *