ಸಮಾಜ ಸೇವೆ ಮಾಡಿ- ಮೆರಿಯನ್
ಕೈಕಂಬ: ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಮೂಲಕ ಜನರ ನೋವಿಗೆ ಧ್ವನಿಯಾಗಬೇಕು ಎಂದು ಮೆರಿಯನ್ ಎಂ ಪಿರೇರಾ ಹೇಳಿದರು. ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಲ್ಲಿಪಾಡಿ ಇಲ್ಲಿಯ ವಾಮಂಜೂರು ಸೈಂಟ್ ರೈಮಂಡ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉಲ್ಲೇಖಿಸಿ ಮಾತನಾಡಿದರು.

ಯುವಕರು ದೇಶದ ಆಗು ಹೋಗುಗಳ ಬಗ್ಗೆ ಸ್ಪಂದಿಸಬೇಕು. ಜಾಗತಿಕ ಸಮಸ್ಯೆಗಳಿಗೆ ಯುವಕರು ಸ್ಪಂದಿಸುವುದು ಅನಿವಾರ್ಯ ಸಮಸ್ಯೆಗಳಿಗೆ ಮಾನವೀಯ ನೆರವೂ ನೀಡುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀ ನರಸಿಂಹ ದೇವಸ್ಥಾನದ ಅರ್ಚಕರು ವಿಷ್ಣು ಮೂರ್ತಿ ಭಟ್ ಇಂಡಿಯನ್ ಏಕ್ಸ್‍ಪ್ರೆಸ್ ಇದರ ಮುದ್ರಣ ರಾಜುಕೋಟ್ಯಾನ್, ಉದ್ಯಮಿ ಹರೀಶ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಶೆಟ್ಟಿ, ಪೊಳಲಿ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ, ಉಪಪ್ರಾಂಶುಪಾಲರು ಸಿಸ್ಟರ್ ಸಗಾಯ್ ಸೆಲ್ವಿ ಉಪಸ್ಥಿತರಿದ್ದರು. ದ.ಕ.ಜಿ.ಪ.ಶಾಲೆ ಪಲ್ಲಿಪಾಡಿ ಮುಖ್ಯೋಪಾಧ್ಯಾಯರು ಎನ್ ಆನಂದ ನಾಯ್ಕಾ ಶುಭಾಶಂಸನೆ ಗೈದರು. ಸಿಸ್ಟರ್ ಡಾ|ಸೆರಿನಾವಾಸ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ದೊಂಬಯ್ಯ ಇಟ್ಕಿದು ಶಿಬಿರಾಧಿಕಾರಿ ಕನ್ನಡ ಉಪಾನ್ಯಾಸಕಿ ಸುಪ್ರೀತ್ ರವರು ಕಾರ್ಯನಿರ್ವಹಿಸಿದ್ದರು. ಶಿಬಿರದ ಮೇಲ್ವಿಚಾರಕರಾಗಿ ಕುಮಾರಿ ಹೆರೋಲಿನ್ ಮತ್ತು ಬೆನಡಿಕ್ಟ್ ವಾಲ್ಟರ್ ಉಪಸ್ಥಿತರಿದ್ದರು.












