ಬಂಟ್ವಾಳ:ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಾಧನೆ ಮತ್ತು ಶ್ರಮದ ಜೊತೆಗೆ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎನ್ನುವುದಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳ ಉತ್ಪನ್ನಗಳಿಗಿರುವ ಮಾರುಕಟ್ಟೆಯೇ ಸಾಕ್ಷಿ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಪ್ರೀಯನ್ ಮಿರಾಂದ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಕಛೇರಿ , ಬಂಟ್ವಾಳ, ಸ್ತ್ರೀಶಕ್ತಿ ಒಕ್ಕೂಟದ ಸ್ತ್ರೀ ಶಕ್ತಿ ಭವನದಲ್ಲಿ ಡಿ.18 ರಿಂದ ಡಿ 20ರವರೆಗೆ ಸ್ತ್ರೀ ಶಕ್ತಿ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
DSC_1038
ಮಹಿಳೆಯರು ಸ್ವತಃ ಮನೆಯಲ್ಲಿ ಉತ್ಪಾದಿಸಿದ ಉತ್ಪನ್ನಗಳು ನಿಗದಿತ ದರದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ವಿಶ್ವಾಸ ಗಳಿಸಿರುವುದು ಇಲಾಖೆಗೆ ಗೌರವ ತಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ನಿರೂಪಣಾಧಿಕಾರಿ ನಟರಾಜ್ ವಹಿಸಿದ್ದರು. ವೇದಿಕೆಯಲ್ಲಿ ಸಹಾಯಕ ತೋಟಗಾರಿಕಾಧಿಕಾರಿ ದಿನೇಶ್, ಸಹಾಯಕ ಕೃಷಿ ಅಧಿಕಾರಿ ನಂದನ್ ಶೆಣೈ, ಬಂಟ್ವಾಳ ಬ್ಲಾಕ್ ಸೊಸೈಟಿ ಅಧ್ಯಕ್ಷ ಸುಜಾತ ಉಪಸ್ಥಿತರಿದ್ದರು. ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಗಾಯತ್ರಿ ಕಂಬಳಿ ಸ್ವಾಗತಿಸಿ, ಸಿಡಿಪಿಓ ಮಲ್ಲಿಕಾ ವಂದಿಸಿದರು. ಮೇಲ್ವಿಚಾರಕಿ ಭಾರತಿ ನಿರೂಪಿಸಿದರು.
ದಿನಬಳಕೆಯ ಸಾಂಬಾರ್ ಪದಾರ್ಥಗಳು, ಬೇಕರಿ ತಿಂಡಿ ತಿನಿಸುಗಳು, ವಿವಧ ಬಗೆಯ ಉಪ್ಪಿನಕಾಯಿ, ಗೃಹಾಲಂಕಾರ ವಸ್ತುಗಳು, ಸೀರೆಗಳು ಸಿದ್ಧ ಉಡುಪುಗಳು, ತರಕಾರಿ, ಹೂವುಗಳು, ತೆಂಗಿನಕಾಯಿ, ಫಿನೈಲ್, ಬ್ಲೀಚಿಂಗ್ ಪೌಡರ್, ಸೋಪು ವಾಟರ್, ಕ್ಯಾಂಡಲ್, ಬತ್ತಿಕಟ್ಟು, ಹೋಮ ವಾಟರ್ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಸ್ತ್ರೀ ಶಕ್ತಿ ಗುಂಪುಗಳು ಉತ್ಪಾದಿಸಿದ ಗೃಹೋಪಯೋಗಿ ಉತ್ಪನ್ನಗಳು ಮಾರಾಟ ಮೇಳದಲ್ಲಿ ಇದ್ದವು

By suddi9

Leave a Reply

Your email address will not be published. Required fields are marked *