ಬಂಟ್ವಾಳ: ಇಲ್ಲಿನ ಕೈಕುಂಜೆಯ 13ನೇ ವಾರ್ಡ್ನ ಪರಿಸರದ ಸುಮಾರು 160ಕ್ಕೂ ಹೆಚ್ಚಿನ ಮನೆಗಳಿಗೆ 15 ದಿವಸಗಳಿಂದ ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ, ನಂದರಬೆಟ್ಟು, ಅಲೆತ್ತೂರು ಪರಿಸರದ ಸುಮಾರು 160ಕ್ಕೂ ಹೆಚ್ಚು ಮನೆಗಳಿಗೆ 15 ದಿನಗಳಿಂದ ಪುರಸಭೆ ನೀರು ಪೂರೈಸದೆ ಸತಾಯಿಸುತ್ತಿದೆ.

ಇಲ್ಲಿನ ನಿವಾಸಿಗಳು ನೀರಿಗಾಗಿ ಹಾಹಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಸ್ಥಳಿಯ ಪುರಸಭೆ ಸದಸ್ಯೆ ಸುಗುಣ ಕಿಣಿ ಮನವಿ ನೀಡಿದರೂ ಕಿಮ್ಮತ್ತೂ ಬೆಲೆ ನೀಡಿಲ್ಲ. 15 ದಿನಗಳಿಂದ ಖಾಸಗಿ ವ್ಯಕ್ತಿಯ ಟ್ಯಾಂಕರ್ ಮೂಲಕ ನೀರನ್ನು ಇಲ್ಲಿನ ಸದಸ್ಯೆ ಸುಗುಣ ಕಿಣಿ ನೀಡಿದ್ದಾರೆ. ಆದರೂ ಪುರಸಭೆ ನೀರು ನೀಡುವ ಬಗ್ಗೆ ಈ ವರೆಗೆ ತಲೆಕೆಡಿಕೊಂಡಿಲ್ಲ.
ಅಲೆತ್ತೂರು ಪರಿಸರದಲ್ಲಿ ಹೊಸ ಕೊಳವೆ ಬಾವಿಯನ್ನು ತೆರೆಯುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದೆ ಆದರೆ ನೀರು ಕಡಿಮೆಯಾಗಿ ಪಂಪ್ ಹೊತ್ತಿ ಹೋದ ಮೇಲೂ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಇಲ್ಲಿನ ಅಧಿಕಾರಿಗಳು ಮತ್ತು ಆಡಳಿತ ಪಕ್ಷ ರಾಜಕೀಯ ಬಿಟ್ಟು, ಇವತ್ತು ಸಂಜೆಯೊಳಗೆ 13ನೇ ವಾರ್ಡ್ನ ಜನರಿಗೆ ಕುಡಿಯುವ ನೀರು ಕೊಡದಿದ್ದರೆ ನಾಳೆ ಇಲ್ಲಿನ ಜನರನ್ನು ಸೇರಿಸಕೊಂಡು ಪುರಸಭೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಬಿಸುತ್ತೇನೆ ಎಂದು ಸದಸ್ಯೆ ತಿಳಿಸಿದ್ದಾರೆ.