ಬಂಟ್ವಾಳ: ಖಾಸಗಿ ವಸತಿ ಸಮುಚ್ಚಯದ ಮನೆಗಳ ಶೌಚಗ್ರಹದ ಕೊಳಚೆ ನೀರು ಜನರು ನಡೆದಾಡುವ ರಸ್ತೆಗೆ ಒಡ್ಡುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿರುವ ನಾಗರೀಕರು ಈ ಸಮಸ್ಯೆ ಅನುಭವಿಸುತ್ತಿದ್ದು ಚರಂಡಿ ನಿರ್ಮಿ ಸುವಂತೆ ಕಟ್ಟಡದ ಮಾಲಿಕರಿಗೆ ತಿಳಿಸಿದರೂ ನಿರ್ಲಕ್ಷ ವಹಿಸಿದ್ದಾರೆ ಎನ್ನುವ ದೂರು ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.

1 (1)

2 (1)

3 (1)
ಈ ವಸತಿ ಸಮುಚ್ಚಯದಲ್ಲಿ ಹತ್ತಕ್ಕಿಂತ ಹೆಚ್ಚು ಮನೆಗಳಿವೆ. ಈ ಮನೆಗಳ ಶೌಚಾಗೃಹದಿಂದ ಹೊರ ಬರುವ ಕೊಳಚೆ ನೀರು ಕಟ್ಟಡದ ಮುಂಭಾಗದಲ್ಲಿರುವ ಹಾಳು ಬಾವಿಯಲ್ಲಿ ಸಂಗ್ರಹಗೊಳ್ಳುತ್ತಿದೆ. ಆದರೆ ಕಳೆದ ಹಲವು ಸಮಯಗಳಿಂದ ಈ ಬಾವಿ ತುಂಬಿದ್ದು ಕೊಳಚೆ ಹರಿದು ಹೋಗಲು ಸಾಧ್ಯವಾಗದೆ ಆವರಣ ಗೋಡೆಯ ಬುಡದಿಂದ ಒಸರಿನಂತೆ ಜಿನುಗುತ್ತಿದೆ.

ಇದು ರಸ್ತೆ ಹಾಗೂ ಪಕ್ಕದ ಖಾಲಿ ಜಮೀನಿಗೆ ಹರಿಸು ಬರುತ್ತಿದ್ದು ಈ ಭಾಗದಲ್ಲಿ ನಡೆದುಕೊಂಡು ಹೋಗುವ ಜನರು ಮೂಗುಮುಚ್ಚಿಕೊಂಡು ಸಂಚರಿಸುವಂತೆ ಮಾಡಿದೆ. ಕೊಳಚೆ ನೀರು ಹರಿಯದೇ ನೀಮತಿರುವುದರಿಂದ ಮಲೇರಿಯಾ, ಡೆಂಗು ಮೊದಲಾದ ಸಾಂಕ್ರಮಿಕ ರೋಗಗಳನ್ನು ಹರಡುವ ಸೊಳ್ಳೆಗಳು ಹೊಟ್ಟಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಸ್ಥಳೀಯರು ಪುರಸಭೆಗೆ ದೂರು ನೀಡಿದರೂ ಸ್ಪಂದನೆ ಸಿಕ್ಕಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *