ಶ್ರೀ ಸತ್ಯ ನಾರಾಯಣ ಮಹಾ ಪೂಜೆ-ವಾರ್ಷಿಕ ಸ್ನೇಹಮಿಲನ ಸಂಭ್ರಮ
ಮುಂಬಯಿ: ಮಹಾನಗರದಲ್ಲಿ ಕಳೆದ ಆರು ದಶಕಗಳಿಂದಸೇವಾ ನಿರತ ಭಂಡಾರಿ ಸೇವಾ ಸಮಿತಿ ತನ್ನ ನೂತನ ಕಚೇರಿಯನ್ನು ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಮುಲುಂಡ್ ಪಶ್ಚಿಮದಲ್ಲಿನ ರೈಲ್ವೇ ಸ್ಟೇಷನ್‍ನ ಸಮೀಪದಝೇವೆರ್ ರೋಡ್‍ನಲ್ಲಿರುವ ಲಕ್ಷ್ಮೀ ಸದನ್ ಕಟ್ಟಡದ ತಳಮಹಡಿಯಲ್ಲಿಶ್ರೀ ಸತ್ಯ ನಾರಾಯಣ ಮಹಾ ಪೂಜೆಯೊಂದಿಗೆ ಸೇವಾರ್ಪಣೆ ಗೊಳಿಸಿತು. ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ನೂತನ ಕಚೇರಿ ಉದ್ಘಾಟಿಸಿದರು.

Bhandary Office Inauguration - 1

Bhandary Office Inauguration - 4

Bhandary Office Inauguration - 8 (1)

Bhandary Office Inauguration - 14

Bhandary Office Inauguration - A1

Bhandary Office Inauguration - A3

Bhandary Office Inauguration - B1ಈ ಶುಭಾವಸರದಲ್ಲಿ ಸೇವಾ ಸಮಿತಿ ಉಪಾಧ್ಯಕ್ಷರುಗಳಾದ ನ್ಯಾ| ಆರ್.ಎಂ ಭಂಡಾರಿ, ಗೌ| ಪ್ರ|ಕಾರ್ಯದರ್ಶಿ ವಿಜಯ್ ಆರ್.ಭಂಡಾರಿ, ಗೌ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಆರ್.ಭಂಡಾರಿ, ಪುರುಷೋತ್ತಮ ಜಿ.ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಕರುಣಾಕರ್ ಬಿ.ಭಂಡಾರಿ, ಶಶಿಧರ್ ಡಿ.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಲಲಿತಾ ವಿ.ಭಂಡಾರಿ, ಉಪಕಾರ್ಯಾಧ್ಯಕ್ಷೆ ವನಿತಾ ಎಸ್.ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ, ಮಾಜಿ ಅಧ್ಯಕ್ಷಬಾಲಕೃಷ್ಣ ಪುತ್ತೂರು ಪುಣೆ ಹಾಗೂ ಸಂಸ್ಥೆಯ ಮಾಜಿ ಮತ್ತು ಹಾಲಿ ಅನೇಕ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುತ್ಸದ್ಧಿಗಳಾದ ಕಡಂದಲೆ ಸುರೇಶ್ ಎಸ್.ಭಂಡಾರಿ, ಅಶೋಕ್ ಶಿವಣ್ಣ ಭಂಡಾರಿ, ಡಾ| ಶಿವರಾಮ್ ಕೆ.ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದುಶುಭಾರೈಸಿದರು. ಶ್ರೀ ಕಚ್ಚೂರು ನಾಗೇಶ್ವರ ದೇವರನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ದೇವಿಪ್ರಸಾದ್ ಭಟ್ ಉಚ್ಚಿಲ ತಮ್ಮ ಪೌರೋಹಿತ್ಯದಲ್ಲಿ ಶ್ರೀ ಸತ್ಯ ನಾರಾಯಣ ಮಹಾಪೂಜೆ, ದ್ವಾರಮಹಾಲಕ್ಷ್ಮೀ ಪೂಜೆನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಆಶೀರ್ವಚಿಸಿದರು. ಶೇಖರ್ ಎಸ್.ಭಂಡಾರಿ ಮತ್ತು ಶಾಂತಿ ಶೇಖರ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಬಳಿಕ ಸೇವಾ ಸಮಿತಿಯ 62ನೇ ವಾರ್ಷಿಕ ಸ್ನೇಹಮಿಲನವನ್ನು ಸ್ಥಳಿಯ ಸರಸ್ವತಿವಾಡಿ ಶ್ರೀಕುಚ್ ದೇಶಿಯ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನಟ್ರಸ್ಟ್‍ಸಭಾಗೃಹದಲ್ಲಿಜರುಗಿಸಲಾಗಿದ್ದು, ಸಮಾಜದ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

By suddi9

Leave a Reply

Your email address will not be published. Required fields are marked *