ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆ ಅನನ್ಯ: ಸುರೇಶ್ ಭಂಡಾರಿ
ಮುಂಬಯಿ: ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆಯೂ ಅನನ್ಯವಾಗಿದೆ. ಸಮಸ್ತ ಜನತೆಯ ಭಾವನೆಗಳಿಗೆ ಹೊಂದಿಕೊಂಡು ಬಾಳುವ ಭಂಡಾರಿ ಜನಾಂಗಕ್ಕೆ ತನ್ನದೇ ಆದ ಜೀವನ ವೈಶಿಷ್ಟ್ಯತೆಯಿದೆ. ಇಂತಹ ಪರಂಪರೆ ಯುಳ್ಳ ಭಂಡಾರಿ ಸಮಾಜವನ್ನು ಭವಿಷ್ಯತ್ತಿನ ಪೀಳಿಗೆಯತ್ತ ಒಯ್ಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ವ್ಯಕ್ತಿತ್ವ ವಿಕಾಸನದಿಂದ ಇತರ ಸಮಾಜಗಳ ಅರಿವು ಪ್ರಾಪ್ತಿಸುವುದು. ಆವಾಗಲೇ ನಮ್ಮಲ್ಲೂ ಬದಲಾವಣೆಯ ಬದುಕನ್ನು ರೂಢಿಸಿ ಕೊಳ್ಳಬಹುದು. ಬಂಧುತ್ವದ ಬದುಕಿಗೆ ಭಂಡಾರಿ ಸಮಾಜ ಮಾದರಿ ಆಗಿದ್ದು, ನಮ್ಮ ಯುವ ಪೀಳಿಗೆಯೂ ಇದನ್ನು ಮೈಗೂಡಿಸಿ ಮುನ್ನಡೆಯಬೇಕು ಇದೇ ನಮ್ಮ ಆಶಯ. ಪರಸ್ಪರ ಸಾಮರಸ್ಯದ ಜೀವನವನ್ನು ರೂಪಿಸಿ ಕೊಂಡಾಗಲೇ ಸರ್ವರಿಗೂ ನೆಮ್ಮದಿಯ ಬದುಕು ಹಸನಾಗುವುದು. ಸಮಾಜವೂ ಸ್ವಸ್ಥವಾಗಿರುವುದು ಎಂದು ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಬಾರ್ಕೂರು ಅಧ್ಯಕ್ಷ, ಆಡಳಿತ ಮೊಕ್ತೇಸರ ಮತ್ತು ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.
ಭಂಡಾರಿ ಸೇವಾ ಸಮಿತಿ ತನ್ನ 62ನೇ ವಾರ್ಷಿಕೋತ್ಸವವನ್ನು ಕಳೆದ ಆದಿತ್ಯವಾರ ದಿನಪೂರ್ತಿ ಮುಲುಂಡ್ ಪಶ್ಚಿಮದ ಸರಸ್ವತಿವಾಡಿ ಅಲ್ಲಿನ ಶ್ರೀಕುಚ್ ದೇಶಿಯ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು. ಸೇವಾ ಸಮಿತಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂ¨ದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ಸುರೇಶ್ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Bhandary Seva Samiti Annual Day-1

Bhandary Seva Samiti Annual Day-3

Bhandary Seva Samiti Annual Day-4

Bhandary Seva Samiti Annual Day-9

Bhandary Seva Samiti Annual Day-10

Bhandary Seva Samiti Annual Day-11

Bhandary Seva Samiti Annual Day-12

Bhandary Seva Samiti Annual Day-16

Bhandary Seva Samiti Annual Day-20

Bhandary Seva Samiti Annual Day-30

Bhandary Seva Samiti Annual Day-31

Bhandary Seva Samiti Annual Day-32

Bhandary Seva Samiti Annual Day-36

Bhandary Seva Samiti Annual Day-37

Bhandary Seva Samiti Annual Day-A1

Bhandary Seva Samiti Annual Day-B3

Bhandary Seva Samiti Annual Day-B4 (1)

Bhandary Seva Samiti Annual Day-B6 (1)ಪ್ರಾಚೀನತೆವುಳ್ಳ ನಮ್ಮ ಸಮಾಜವನ್ನು ಇತಿಹಾಸದಲ್ಲಿ ಭದ್ರವಾಗಿರಿಸಲು ಭಂಡಾರಿಗಳೆನ್ನೆವ ಅಭಿಮಾನ ನಮ್ಮಲ್ಲಿರಬೇಕು. ಸಾಕ್ಷರತೆಯಿಂದ ಸಮಾಜದ ಮುನ್ನಡೆ ಸಾಧ್ಯ. ಆದುದರಿಂದ ನಮ್ಮಲ್ಲಿನ ಶಿಕ್ಷಣ ವಂಚಿತರಿಗೆ ಪ್ರೋತ್ಸಾಹಿಸಿ ಸುಶಿಕ್ಷಿತರನ್ನಾಗಿಸಬೇಕು. ನಮ್ಮಲ್ಲಿನ ಬಹುಮುಖ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಬೇಕು. ಅವರಿಂದ ಸಮುದಾಯಕ್ಕೂ ಸಮಾಜಕ್ಕೂ ಗೌರವ ಫಲಿಸುವುದು. ಆವಾಗಲೇ ಸಮುದಾಯದ ಸಂರಕ್ಷಣೆ ಸಾಧ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶೇಖರ್ ಭಂಡಾರಿ ಅಭಿಪ್ರಾಯ ಪಟ್ಟರು. ಗೌರವ ಅತಿಥಿಗಳಾಗಿ ಶಿವಾ’ಸ್ ಹೇರ್ ಡಿಸೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಮುಲುಂಡ್‍ನ ಉದ್ಯಮಿ ಅಶೋಕ್ ಶಿವಣ್ಣ ಭಂಡಾರಿ ಹಾಗೂ ಮಾಜಿ ಅಧ್ಯಕ್ಷ ಬಾಲಕೃಷ್ಣ ಪುತ್ತೂರು ಪುಣೆ ಉಪಸ್ಥಿತರಿದ್ದು ಸಮಾಜದ ಮಕ್ಕಳಿಗೆ ವಿದ್ಯಾಥಿರ್ü ವೇತನ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಸೇವಾ ಸಮಿತಿ ಜೊತೆ ಕಾರ್ಯದರ್ಶಿ ನಾರಾಯಣ ಆರ್.ಭಂಡಾರಿ, ಜೊತೆ ಕೋಶಾಧಿಕಾರಿ ಶಶಿಧರ್ ಡಿ.ಭಂಡಾರಿ ಮಹಿಳಾ ವಿಭಾಗಧ್ಯಕ್ಷೆ ಲಲಿತಾ ವಿ.ಭಂಡಾರಿ, ಉಪ ಕಾರ್ಯಾಧ್ಯಕ್ಷೆ ವನಿತಾ ಎಸ್.ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ ಉಪಸ್ಥಿತರಿದ್ದು, ಸಮಾಜದ ಮುತ್ಸದ್ಧಿಗಳಾದ ಕಡಂದಲೆ
ಸುರೇಶ್ ಎಸ್.ಭಂಡಾರಿ ಮತ್ತು ಶೋಭಾ ಸುರೇಶ್, ಡಾ| ಶಿವರಾಮ ಕೆ.ಭಂಡಾರಿ ಮತ್ತು ಅನುಶ್ರೀ ಶಿವರಾಮ್, ಬಾಲಕೃಷ್ಣ ಪುತ್ತೂರು ಪುಣೆ ಮತ್ತು ಸುಲೋಚನಾ ಬಾಲಕೃಷ್ಣ ದಂಪತಿಗಳನ್ನು ಹಾಗೂ ಅಶೋಕ್
ಎಸ್.ಭಂಡಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಸುಜತಾ ಶಂಕರ್ ಭಂಡಾರಿ ಅವರು ಕುಲದೇವರು ಶ್ರೀ ಕಚ್ಚೂರು ನಾಗೇಶ್ವರನನ್ನು ಸ್ತುತಿಸಿ ಪ್ರಾರ್ಥನೆ ಗೈದರು. ಉಪಾಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಸಂಸ್ಥೆಗೆ ಶ್ರಮಿಸಿದವರ ಸೇವೆಯನ್ನು ಸ್ಮರಿಸಿದರು. ಜೊತೆ ಕೋಶಾಧಿಕಾರಿಗಳಾದಕರುಣಾಕರ್ ಬಿ.ಭಂಡಾರಿ ಸಂಸ್ಥೆಯ ಸಾಧನೆಯನ್ನು ಬಣ್ಣಿಸಿದರು. ನಿಕಟಪೂರ್ವ ಗೌ| ಪ್ರ| ಕಾರ್ಯದರ್ಶಿ ಪ್ರಭಾಕರ ಪಿ.ಭಂಡಾರಿ ಸನ್ಮಾನಿತರನ್ನು ಪರಿಚಯಿಸಿ, ಸಭಾ
ಕಾರ್ಯಕ್ರಮ ನಿರೂಪಿಸಿದರು. ಗೌ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ ಮಕ್ಕಳ ಯಾದಿಯನ್ನು ಪ್ರಕಟಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾರಿ ಮತ್ತು ಸರಿತಾ ಕೆ.ಬಂಗೇರಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಗೌ| ಪ್ರ| ಕಾರ್ಯದರ್ಶಿ ವಿಜಯ್ ಆರ್.ಭಂಡಾರಿ ಸ್ವಾಗತಿಸಿ ವಂದಿಸಿದರು. ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಭಂಡಾರಿ ಸಮಾಜದ ನೂರಾರು ಭಂಡಾರಿ ಬಂಧುಗಳು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದು, ವಾರ್ಷಿಕೋತ್ಸವದ ಅಂಗವಾಗಿ ಸಮಾಜದ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಉಡುಪಿಯ ಜಯಶೀಲ ಭಂಡಾರಿ ಮತ್ತು ಬಳಗವು `ತೆಲಿಕೆ, ನಲಿಕೆ ಬೊಕ್ಕ ಟೈಟಾನಿಕ್ ಅಜ್ಜಿ’ ಹಾಸ್ಯ ಪ್ರಹಸನ ಕಾರ್ಯಕ್ರಮವನ್ನೂ ಹಾಗೂ ಸಂಸ್ಥೆಯ ಸದಸ್ಯರು `ಸಂಘದ ಕಲೇಕ್ಷನ್’ ತುಳು ನಾಟಕ ಪ್ರದರ್ಶಿಸಿದರು.

By suddi9

Leave a Reply

Your email address will not be published. Required fields are marked *