ಕಾರ್ಮಿಕರನ್ನು ಮಾರ್ಮಿಕ ಗೊಳಿಸಿದೆ ಭಾರತ್ ಬ್ಯಾಂಕ್:ರಾಜಶೇಖರ್ ಕೋಟ್ಯಾನ್
ಮುಂಬಯಿ: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 85ನೇ ಶಾಖೆಯು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಮಲಾಡ್ ಪೂರ್ವದ ವೆಸ್ಟರ್ನ್ ಈಸ್ಟರ್ನ್ ಎಕ್ಸ್ಪ್ರೆಸ್ ಹೈವೇ ಸನಿಹದಲ್ಲಿನ ರಾಣಿ ಸಾತಿ ಮಾರ್ಗದಲ್ಲಿನ ಶ್ಹಾ ಆರ್ಕೇಡ್ನಲ್ಲಿ ಸೇವಾರಂಭಿಸಿತು. ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ನೂತನ ಶಾಖೆಯನ್ನು ರಿಬ್ಬನ್ ಕತ್ತರಿಸಿ ಶುಭಾರಂಭಗೊಳಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ.ಪೂಜಾರಿ ಮತ್ತು ಚಲನಚಿತ್ರ ನಟ, ನಿರ್ಮಾಪಕ ರಾಜಶೇಖರ ಕೋಟ್ಯಾನ್ ಮುದರಂಗಡಿ ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ|ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್ನ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅವರು ಕಂಪ್ಯೂಟರೀಕೃತ ಸೇವೆಗಳಿಗೆಚಾಲನೆಯನ್ನೀಡಿ ಶಾಖೆಯ ಪ್ರಗತಿಗೆ ಶುಭಕೋರಿದರು. ಉದ್ಯಮಿಗಳಾದ ಗೋಪಿ ದಿಡ್ವಾನಿಯಾ, ಸಿಎ| ಪ್ರಭು ದೇಸಾಯಿ, ಜಿ.ಬಿ ಬೆಳ್ಳೆಕರ್, ಅರುಣ್ ಕೋಟ್ಯಾನ್, ನವೀನ್ ಕರ್ಕೇರ, ಸುರೇಶ್ ಕರ್ಕೇರ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಆನಂದ್ ಜತ್ತನ್, ಗುಣಪಾಲ್ ಶೆಟ್ಟಿ, ರಾಮ್ಜೀ ಭಾಯಿ, ಸೋಮನಾಥ ಪೂಜಾರಿ, ವಿಶ್ವನಾಥ್ ಶೆಟ್ಟಿ, ದಯಾನಂದ ಪೂಜಾರಿ ಮತ್ತಿತರ ಗಣ್ಯರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ರಾಜಶೇಖರ ಕೋಟ್ಯಾನ್ ಮಾತನಾಡಿ ನಾನೋರ್ವ ಹೊಟೇಲು ಕಾರ್ಮಿಕನಾಗಿದ್ದು ಮೂವತ್ತು ರೂಪಾಯಿ ಸಂಬಳಕ್ಕೆ ದುಡಿಯುತ್ತಿದೆ. 1978ರಲ್ಲಿ ಜಯ ಸುವರ್ಣರು ನನ್ನ ಸಂಬಳದ ಒಂದು ತಿಂಗಳ 10 ರೂಪಾಯಿಯನ್ನು ಪಡೆದು ಈ ಬ್ಯಾಂಕ್ನ ಷೇರುದಾರನಾಗಿಸಿದ್ದರು. ಇಂದು ಸುಮಾರು 37 ವರ್ಷಗಳ ಬಳಿಕ ಇದೇ ಬ್ಯಾಂಕ್ನ ಶಾಖೆಯನ್ನು ನನ್ನ ಹಸ್ತಗಳಿಂದಲೇ ದೀಪ ಪ್ರಜ್ವಲಿಸುತ್ತಿರುವುದು ನನ್ನ ಸೌಭಾಗ್ಯವೇ ಸರಿ. ಕಾರ್ಮಿಕರನ್ನು ಮಾರ್ಮಿಕ (ಪ್ರಭಾವಶಾಲಿ) ರನ್ನಾಗಿಸಿದೆ ಈ ಭಾರತ್ ಬ್ಯಾಂಕ್ ಎಂದು ಭಾವೋದ್ಗರಿತರಾಗಿ ಹರ್ಷೋಲ್ಲಾಸದಿಂದ ನುಡಿಯುತ್ತಾ ಬ್ಯಾಂಕ್ನ ಸೇವೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೇಗೂ ಹರಡಲಿ ಎಂದು ಶುಭೇಚ್ಚ ಕೋರಿದರು. ಜಯ ಸುವರ್ಣರು ನಮಗೆಲ್ಲಾ ಗುರು ಸಮಾನರು. ಅವರ ಅನುಗ್ರಹ ನಮ್ಮೆಲ್ಲರಿಗೂ ವರದಾನವಾಗಿದೆ. ಬರೇ ಬಿಲ್ಲವ ಸಮಾಜದ ಮುತ್ಸದ್ಧಿಯಾಗದೆ ಸಮಸ್ತ ಜನತೆಗೆ ಮಾರ್ಗದರ್ಶಕರಾದ ಸುವರ್ಣರು ತಮ್ಮ ದಿಟ್ಟ ನಿಲುವಿನಿಂದಈ ಬ್ಯಾಂಕನ್ನು ಇಷ್ಟೊಂದು ಮಟ್ಟದಲ್ಲಿ ಬೆಳೆಸಿ ಲಕ್ಷಾಂತರ ಜನರಿಗೆ ಆಶ್ರಯದಾತರಾಗಿದ್ದಾರೆ.
ಅವರ ಒಳ್ಳೆಯ ನಡೆಯಿಂದ ಬ್ಯಾಂಕ್ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಾದ್ಯಂತ ಪಸರಿದ್ದು ಭವಿಷ್ಯತ್ತಿನ ದಿನಗಳಲ್ಲಿ ಯುಪಿ, ಬಿಹಾರ್, ದೆಹಲಿಗೂ ವಿಸ್ತಾರಗೊಂಡು ಎಲ್ಲರ ಪಾಲಿಗೆ ಶ್ರೀಮಂತಿಕೆಯನ್ನು ದಯಪಾಲಿಸಲಿ ಎಂದು ಸಂತೋಷ್ ಪೂಜಾರಿ ತಿಳಿಸಿದರು. ಭಾರತ್ ಬ್ಯಾಂಕ್ನ ನೌಕರ ವೃಂದದ ಗ್ರಾಹಕ ಸಂಬಂಧ ಅನನ್ಯವಾದದ್ದು. ನನ್ನ ತಿಳುವಳಿಕೆಯಂತೆ ಯಾವನೇ ಒಬ್ಬರ ಬಗ್ಗೆ ದಾವೆ ಇಲ್ಲ ಬದಲಾಗಿ ಸೇವೆಯನ್ನೇ ಕಂಡಿದ್ದೇನೆ. ಗ್ರಾಹಕರಲ್ಲಿ ಜಾಗೃತರಾಗಿ ಸಮರ್ಪಕ ಸೇವೆ ಕಲ್ಪಿಸಲು ಭಾರತ್ ಬ್ಯಾಂಕ್ ಮೊದಲಿಗಿದೆಎಂದು ಗೋಪಿ ದಿಡ್ವಾನಿಯಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.ಸಿಎ| ಪ್ರಭು ದೇಸಾಯಿ ಮಾತನಾಡಿ ಭಾರತ್ ಬ್ಯಾಂಕ್ನ ಸೇವೆ ಬಹುಶ್ರೇಷ್ಠವಾದದ್ದು, ಬ್ಯಾಂಕ್ನ 101 ಶಾಖೆಗಳ ಕನಸು 501ಕ್ಕೆ ಏರಲಿ ಮಾತು ಆಮೂಲಕ ಬ್ಯಾಂಕ್ ಮತ್ತು ಗ್ರಾಹಕರು ಸಂತೃಪ್ತಮಯ ಗೊಳ್ಳಲಿ ಎಂದರು. ಜಿ.ಬಿ ಬೆಳ್ಳೆಕರ್ ಮಾತನಾಡಿ ಈ ಬ್ಯಾಂಕ್ನವರು ಇಷ್ಟೊಂದು ಪರಿಣತ ಯುವ ನೌಕರರನ್ನು ಎಲ್ಲಿಂದ ಹುಡುಕಾಡುತ್ತಾರೋ ಎಂದು ತಿಳಿಯ ಬಯಸುತ್ತೇನೆ. ಪ್ರಸ್ತುತ ಪರಿಪೂರ್ಣ ತರಬೇತುದಾರ ನೌಕರರ ಆಯ್ಕೆ ಕಷ್ಟಕರವಾಗಿದ್ದು ಭಾರತ್ ಬ್ಯಾಂಕ್ನ ಈ ವಿಚಾರ ನನಗೆ ಇಷ್ಟವಾಗಿದೆಎಂದರು. ರತ್ನಾಕರ್ ಶೆಟ್ಟಿ ಮುಂಡ್ಕೂರು, ನವೀನ್ ಕರ್ಕೇರ, ಅರುಣ್ ಕೋಟ್ಯಾನ್, ಆನಂದ್ ಜತ್ತನ್ ಮತ್ತಿತರರು ಸಂದರ್ಭೋಚಿತವಾಗಿ ಮಾತನಾಡಿ ಬ್ಯಾಂಕ್ನ ತ್ವರಿತ ಮತ್ತು ನಿಷ್ಠಾವಂತ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಪುಷ್ಫಲತಾ ಸಾಲ್ಯಾನ್, ಸಿ.ಆರ್ ಮೂಲ್ಕಿ ಅವರು ಕ್ರಮವಾಗಿ ನವೀನ್ ಕರ್ಕೇರ, ಸುರೇಶ್ ಕರ್ಕೇರ, ರಾಜಶೇಖರ ಕೋಟ್ಯಾನ್, ಗೋಪಿ ದಿಡ್ವಾನಿಯಾ ಮತ್ತು ಅರುಣ್ ಕೋಟ್ಯಾನ್ ಅವರ ಅನುಪಮ ಸೇವೆಗಾಗಿ ಸನ್ಮಾನಿಸಿ ಅಭಿವಂದಿಸಿದರು. ಅಂತೆಯೇ ಇತರ ಗಣ್ಯರಿಗೂ ಅವರನ್ನು ಪುಷ್ಫಗುಪ್ಚವನ್ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ನ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ಆರ್.ಡಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ಶ್ರೀಮತಿ ಶೋಭಾ ದಯಾನಂದ್, ನಿತ್ಯಾನಂದ ಡಿ.ಕೋಟ್ಯಾನ್, ಉಪ ಮಹಾ ಪ್ರಂಬಧಕರುಗಳಾದ ವಿವೇಕ್ ಎಸ್.ಶ್ಯಾನ್ಭಾಗ್, ಸುರೇಶ್ ಎಸ್.ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್, ಸಹಾಯಕ ಮಹಾ ಪ್ರಂಬಧಕರುಗಳಾದಡಾ| ಯು.ಧನಂಜಯ ಕುಮಾರ್, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್ ಉಪಸ್ಥಿತರಿದ್ದು ಶಾಖಾ ಮುಖ್ಯಸ್ಥ ಪ್ರಕಾಶ್ ಆರ್.ಅಮೀನ್, ಶಾಖೆಯ ಸಿಬ್ಬಂದಿಗಳಾದ ಸರಿತಾ ಎಸ್.ರಾವ್, ಕಿಶೋರಿ ಪೂಜಾರಿ, ಸುದರ್ಶಿನಿ ಎ.ನಾಯರ್, ನೈನಾ ಎನ್.ಕೋಟ್ಯಾನ್ ರೋಹನ್ ಜೆ.ಪೂಜಾರಿ ಮತ್ತು ಕೆ.ಪ್ರದೀಪ್ ಅವರನ್ನು ಗೌರವಿಸಿದರು. ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಮೋಹನ್ ಜಿ.ಪೂಜಾರಿ, ಶಂಕರ್ ಡಿ.ಪೂಜಾರಿ, ಚೆಂಬೂರು ಮಲಾಡ್ ಸ್ಥಳೀಯ ಕಚೇರಿ ಗೌರವ ಕಾರ್ಯಾಧ್ಯಕ್ಷ ಎಂ.ಎನ್ ಕರ್ಕೇರ, ಮಲಾಡ್ ಸ್ಥಳೀಯ ಕಚೇರಿ ಗೌರವ ಕಾರ್ಯದರ್ಶಿ ದಿನೇಶ್ ಸಿ.ಸಾಲ್ಯಾನ್, ಅಭಿವೃದ್ಧಿಇಲಾಖೆಯ ಅಧಿಕಾರಿಗಳಾದ ಸುನೀಲ್ ಗುಜರನ್, ಅವೀಶ್ ಎಸ್.ಪೂಜಾರಿ, ವಿಜಯ್ ಪಾಲನ್ ಮತ್ತಿತರ ಗಣ್ಯರು ಸೇರಿದಂತೆ ಸ್ಥಳಿಯ ನೂತನ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ನೂತನ ಶಾಖೆಗೆ ಶುಭ ಕೋರಿದರು. ಉಳ್ಳೂರು ಶೇಖರ್ ಶಾಂತಿ ವಾಸ್ತುಪೂಜೆ, ಗಣಹೋಮ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಶಾಖೆಯ ಕರ್ಮಚಾರಿ ಸುದರ್ಶಿನಿ ಎ.ನಾಯರ್ ಮತ್ತು ಅನೀಶ್ ನಾಯರ್ ದಂಪತಿ ಹಾಗೂ ಶಾಖೆಯ ಮುಖ್ಯಸ್ಥ ಪ್ರಕಾಶ್ ಆರ್.ಅಮೀನ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಸ್ವಾಗತಿಸಿ ಬ್ಯಾಂಕ್ನ ಸಾಧನಾಶೀಲ ಸೇವೆ, ಪುರಸ್ಕಾರಗಳ ಮಾಹಿತಿಯನ್ನಿತ್ತು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಆರ್.ಅಮೀನ್ ಧನ್ಯವದಿಸಿದರು.


