ಬಂಟ್ವಾಳ; ಪಾಣೆಮಂಗಳೂರು ಸೇತುವೆ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಇನ್ನೂ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಸಾಧ್ಯವಾಗದ ಬಂಟ್ವಾಳ ತಹಶೀಲ್ದಾರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.
ಬಂಟ್ವಾಳ ತಾಲೂಕಿನಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಸಾಧಸಲಾದ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕುರಿತಾಗಿ ಬಂಟ್ವಾಳ ತಾಲೂಕು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ನಿಯೋಗವೊಂದು ಪಾಣೆಮಂಗಳೂರು ಸೇತುವೆ ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ದೂರು ನೀಡಿದರೂ, ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲವೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಹಾಗೆಯೇ ನಿಷೇಧಿಯ ಸ್ಥಳದಲ್ಲೂ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ರಕರ್ತರೂ ಕೂಡ ಜಿಲ್ಲಾಧಿಕಾರಿಯವರ ಗಮನ ಸೆಳೆದರು. ಇದರಿಂದ ಮತ್ತಷ್ಟು ಗರಂ ಆದ ಜಿಲ್ಲಾ ಧಿಕಾರಿ ಎ.ಬಿ ಇಬ್ರಾಹಿಂ ಅವರು, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆಯವರ್ನು ತರಾಟೆಗೆ ತೆಗೆದುಕೊಂಡು, ನೀವೂ ಕೂಡ ಈ ದಂಧೆಯಲ್ಲಿ ಶಾಮೀಲಾಗಿದ್ದಿರೇನ್ರಿ..? ಎಂದು ಪ್ರಶ್ನಿಸಿದರು. ಆಘ ತಹಶೀಲ್ದಾರ್ ಇವತ್ತೇ ನೋಡ್ತೇನೆ ಸಾರ್ ಅಂದಷ್ಟೇ ಹೇಳಿ ಸುಮ್ಮಗಾದರು.

1 (2)

2 (1)

3

5

6
ಕಡತ ಕಾಣೆ.. ಡಿ.ಸಿ.ಅತೃಪ್ತಿ..
ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಸಹಿತ ಕೆಲವೊಂದು ಜಿಲ್ಲಾಧಿಕಾರಿಯವರೇ ಕೇಳಿದ ಕಡತಗಳು ತಾಲೂಕು ಕಛೇರಿಯಲ್ಲಿ ಕಾಣೆಯಾಗಿದ್ದವು. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿಯವರು ತಾಲೂಕು ಕಛೇರಿಯ ಎಲ್ಲಾ ಶಿರಸ್ತೇದಾರರನ್ನು ಕರೆಸಿ ಕ್ಲಾಸ್ ತೆಗೆದುಕೊಂಡರು. ತಾನು ಕೇಳಿದ ಕಡತವೇ ತಮಗೆ ಸಿಗುತ್ತಿಲ್ಲ ಎಂದಾದರೇ ಜನಸಾಮಾನ್ಯರು ಬಂದು ಕೇಳಿದಾಗ ಏನು ಮಾಡ್ತೀರಿ.. ಎಂದು ಆಕ್ರೋಶವ್ಯಕ್ತಪಡಿಸಿದರು.
ಮುಂದಿನ ಗುರುವಾರ ತಾನು ಮತ್ತೆ ಬಂಟ್ವಾಳಕ್ಕೆ ಕಡತ ಪರಿಶೀಲನೆಗೆ ಬರುತ್ತೇನೆ ಆಗ ಎಲ್ಲವೂ ಸರಿಯಾಗಿರಬೇಕು ಎಂದು ಎಚ್ಚರಿಸಿದರು. ರೇಷನ್ ಕಾರ್ಡ್ ಗೆ ಸಂಬಂಧಿಸಿ, ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ತನಿಖಾ ಹಂತದಲ್ಲಿರುವ 2406 ಅರ್ಜಿಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಹಶೀಲ್ದಾರ್ , ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಆಹಾರ ಪೂರೈಕೆ ಇಲಾಖೆ ಅಧಿಕಾರಿಗಳು ಇಂದೇ ಸಭೆ ನಡೆಸಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ತಾಲೂಕಿನಲ್ಲಿ 41 ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವುದು ಪತ್ತೆಯಾಗಿದೆ. ಇದರ್ಲಿ ಶಿಕ್ಷಕರೇ ಹೆಚ್ಚಾಗಿದ್ದರು. ಅದಲ್ಲವನ್ನೂ ರದ್ದು ಪಡಿಸಲಾಗಿದೆ ಎಂದು ಆಹಾರ ಪೂರೈಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಅಂಗನವಾಡಿ, ಸ್ಮಶಾನ ಸಹಿತ ವಿವಿಧ ಉದ್ದೇಶಗಳಿಗೆ ನಿವೇಶನವನ್ನು ಕಾಯ್ದಿರಿಸಲು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ತಹಶೀಲ್ದಾರರಿಗೆ ಸೂಚಿಸಿದರು. ವಿಟ್ಲ ಹೋಬಳಿಯ ಒಕ್ಕೆತ್ತೂರಿನಲ್ಲಿ ಗಡಿಭವನ ನಿರ್ಮಾಣಕ್ಕೆ ಜಮೀನು ಗುರುತಿಸಿ ಪ್ರಸ್ತಾವನೆ ಸಲಿಸುವಂತೆ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್ ಗೆ ನಿರ್ದೇಶನ ನೀಡಿದರು. ಬಿ.ಸಿ.ರೋಡಿನ ಮುಖ್ಯವೃತ್ತಕ್ಕೆ ನಾಮಕರಣ ಗೊಳಿಸುವ ಕುರಿತಂತೆ ಸಂಬಂಧಿಸಿದ ಕಡತವನ್ನು ಜಿಲ್ಲಾಧಿಕಾರಿಯವರ ಕಛೇರಿಗೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ಡಿ.ಸಿ.ಯವರ ಗಮನಕ್ಕೆ ತಂದರು. ತಕ್ಷಣ ತಮ್ಮ ಕಛೇರಿಗೆ ಸಂಪರ್ಕಿಸಿದ ಅವರು, ಈ ಬಗ್ಗೆ ಮಾಹಿತಿ ಪಡೆದುಕೊಂಡು, ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನಿಸಲು ಪ್ರಕಟಣೆ ಹೊರಡಿಸುವಂತೆ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.
ಹದಿನೈದು ದಿನಗಳಾದರೂ ಬಂಟ್ವಾಳ ತಾ.ಪಂ. ಹಳೆ ಕಟ್ಟಡಕ್ಕೆ ನೀರು ಪೂರೈಕೆ ಮಾಡದೇ ಇರುವ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿವರು ಸಂಜೆಯ ಒಳಗಾಗಿ ನೀರು ಪೂರೈಸಿ ಕ್ರಮ ಕೈಗೊಂಡು ತನಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು. ಇದೇ ವೇಳೆ ಕೌಟುಂಬಿಕ ಕಲಹವೊಂದಕ್ಕೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಹೋದರಿಯರಿಬ್ಬರು ಜಿಲ್ಲಾಧಿಕಾರಿಯವರಲ್ಲಿ ಅವಲತ್ತುಕೊಂಡಾಗ , ತಕ್ಷಣ ಎಎಸ್ಪಿ ರಾಹುಲ್ ಅವರನ್ನು ಸಂಪರ್ಕಿಸಿ, ಈ ಪ್ರಕರಣಕ್ಕೆ ಪರಿಹಾರ ಒದಗಿಸುವಂತೆ ತಿಳಿಸಿದರು. ಜಮೀನು ಫ್ಲಾಟಿಂಗ್ ಗೆ ಸಂಬಂಧಿಸಿ ಭೂಶಾಖೆಯಲ್ಲಿ ಒಂದೇ ಕಂಪ್ಯೂಟರ್ ಇರುವುದರಿಂದ ಸಾರ್ಔಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸುಜಿತ್ ಎಂಬವರು ದೂರಿಕೊಂಡರೆ, ನರಿಕೊಂಬಿನಲ್ಲಿ ಪರಂಬೋಕು ಕೆರೆಗೆ ಮಣ್ಣು ಹಾಕಿ ತೊಂದರೆಯಾಘುತ್ತಿರುವ ಬಗ್ಗೆ ಸಂಬಂಧಿಸಿದ ಎಲ್ಲರಿಗೂ ದೂರಿತ್ತರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಮಾಧವ ಕರ್ಬೆಟ್ಟು ಜಿಲ್ಲಾಧಿಕಾರಿಯವರ ಗಮನಸೆಳೆದರು.
ಬಳಿಕ ಮಿನಿಧಾನ ಸೌಧದ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಗುತ್ತಿಗೆದಾರರಿಂದ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಪಡೆದರು

By suddi9

Leave a Reply

Your email address will not be published. Required fields are marked *