ಬಂಟ್ವಾಳ; ಮನೆಯೊಂದರ ಹಟ್ಟಿಯಿಂದಲೇ ಎರಡು ಜರ್ಸಿ ತಳಿಯ ದನಗಳನ್ನು ಯಾರೋ ಕಳ್ಳರು ಕಳವು ಗೈದ ಘಟನೆ ಕಳ್ಳಿಗೆ ಗ್ರಾಮದ ಪೆರಿಯೋಡಿ ಬೀಡು ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ. ಇಲ್ಲಿನ ಶ್ರೀಧರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಹಟ್ಟಿಯಿಂದ ಮುಂಜಾನೆ 3.30 ರ ಹೊತ್ತಿಗೆ ಯಾರೋ ಕಳ್ಳರು ಟೆಂಪೋವೊಂದರಲ್ಲಿ ಕಳವು ಗೈದು ಪರಾರಿಯಾಗಿದ್ದಾರೆ ಎಂದವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದನದ ಬೊಬ್ಬೆ ಕೇಳಿ ತಾನು ನಿದ್ದೆಯಿಂದೆದ್ದು ಹೊರ ಬರುತ್ತಿದ್ದಾಗ ದನವನ್ನು ತುಂಬಿದ್ದ ಟೆಂಪೋ ನೆತ್ರಕೆರೆ ರಸ್ತೆಯತ್ತ ತೆರಳುತ್ತಿರುವುದು ಕಂಡು ಬಂತು. ಕಳವಾದ ದನದ ಮೌಲ್ಯ ಸುಮಾರು 45 ಸಾವಿರ ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ಶ್ರೀಧರ್ ಅವರು ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *