ವಿಟ್ಲ : ವಿಟ್ಲ ವಿಠಲ ಪ್ರೌಢ ಶಾಲೆಯಲ್ಲಿ ಜೇಸೀಐ ಸಹಯೋಗದೊಂದಿಗೆ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಹಾಗೂ ಆಪ್ಸ ಸಮಾಲೋಚನಾ ಕಾರ್ಯಕ್ರಮವು ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಫ್ರೊ| ಗಾನಾವತಿ ಕೆ ಎಂ, ಧೀರೀಂದ್ರ ಮತ್ತು ಸುಧೀಂದ್ರ ಕೆ ಎಂ ಮಾಹಿತಿ ನೀಡಿದರು. ವಿಠಲ ವಿದ್ಯ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯ ಜಾನ್ ಡಿ ಸೋಜಾ ಉಪಸ್ಥಿತರಿದ್ದರು. ಶಿಕ್ಷಕ ರಮೇಶ್ ಬಿ ಕೆ ಸ್ವಾಗತಿಸಿದರು. ಜೇಸಿ ನಿಕಟ ಪೂರ್ವಾಧ್ಯಕ್ಷ ಮೋಹನ್ ಎ ಪ್ರಸ್ತಾವಿಸಿದರು. ಅಧ್ಯಕ್ಷ ಬಾಬು ಕೆ ವಿ ವಂದಿಸಿದರು.
