ವಿಟ್ಲ :ದಿನಾಂಕ 26-02-2016 ರಂದು ನಡೆಯುವ ಜಿಲ್ಲಾ ಮಟ್ಟದ ಸೇವಾದಲ ರ್ಯಾಲಿಯ ಪೂರ್ವಭಾವಿ ಸಭೆಯು ವಿಟ್ಲದ ಮಾದರಿ ಶಾಲೆಯಲ್ಲಿ 3-02-2016ರಂದು ನಡೆಯಿತು. ಈ ಸಭೆಯಲ್ಲಿ ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಡಿ ಬಿ ಅಬೂಬಕ್ಕರ್, ಜೇಸಿಐ ವಿಟ್ಲದ ಅಧ್ಯಕ್ಷ ಬಾಬು ಕೆ ವಿ, ಅನಂತಕೃಷ್ಣ ಹೆಬ್ಬಾರ್, ದೈಹಿಕ ಶಿಕ್ಷಣ ಅಧ್ಯಕ್ಷ ಗುರುನಾಥ ಬಾಗೆವಾಡಿ, ಶಿಕ್ಷಣ ಸಂಯೋಜಕಿ ಪುಷ್ಪಾ, ಪದಾಧಿಕಾರಿ ಸೇಸಪ್ಪ, ಜಿಲ್ಲಾ ಕಾರ್ಯದರ್ಶಿ ಮಂಜೇಗೌಡ, ಮುಖ್ಯ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಕುಮಾರ್ ವದ್ವ, ಸದಸ್ಯರುಗಳು, ರಾಜೇಶ್ ವಿಟ್ಲ ಹಾಗೂ ಇತರರು ಭಾಗವಹಿಸಿದ್ದರು.
