ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸಂಬಂಧಿಸಿ ನಾಮಪತ್ರ ವಾಪಸ್ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರ ಜಿ.ಪಂ. 6, ತಾಪಂ 15 ನಾಮಪತ್ರಗಳು ಹಿಂತೆಗೆಯಲಾಗಿದೆ.
ಜಿ.ಪಂ. ಕ್ಷೇತ್ರಗಳಾದ ಸಂಗಬೆಟ್ಟು – ಹರೀಶ್ ಆಚಾರಿ, ಗೋಳ್ತಮಜಲು – ಯಶೋಧ, ಮಾಣಿ – ಧರ್ಮಾವತಿ, ಕುರ್ನಾಡು – ಪದ್ಮಾವತಿ, ಸಜಿಪಮುನ್ನೂರು – ಶಶಿಕಿರಣ್, ಪುಣಚ – ವಿಶಾಲಾಕ್ಷಿ ನಾಮಪತ್ರ ವಾಪಸ್ ಪಡೆದಿದ್ದಾರೆ.
ತಾ.ಪಂ. ಕ್ಷೇತ್ರಗಳಾದ ಸಂಗಬೆಟ್ಟು ಸಂದೇಶ ಶೆಟ್ಟಿ, ಚೆನ್ನೈತೋಡಿ – ಮೋಹಿನಿ, ವಿನಿತ, ಪಿಲಾತಬೆಟ್ಟು – ಜಯಾನಂದ ಕುಲಾಲ್, ರಾಯಿ – ಸುಲೋಚನ ಕೆ., ಅಮ್ಟಾಡಿ- ರತ್ನಾವತಿ, ಕರಿಯಂಗಳ – ಯೋಗಿಶ್, ಲೋಕೇಶ್ ಪೂಜಾರಿ, ಶಶಿಕಿರಣ್, ಅಮ್ಮುಂಜೆ – ಮಾಧವ, ತುಂಬೆ – ಮನೋಹರ, ಬಾಳ್ತಿಲ – ಪೂರ್ಣಿಮ, ಸಜಿಪಮೂಡ – ಅಬ್ದುಲ್ ರವೂಫ್, ಸಜಿಪಪಡು – ಗೀತಾ ಬಾಸ್ಕರ್, ಬಾಳೆಪುಣಿ – ರಂಜಿತ್ ಗಟ್ಟಿ ಇವರು ನಾಮಪತ್ರ ವಾಪಸ್ ಪಡೆದಿದ್ದಾರೆ.
ಗುರುವಾರ ನಾಮಪತ್ರ ವಾಪಸಾತಿಗೆ ಕೊನೆ ದಿನವಾಗಿದ್ದು, ಸಂಜೆ ವೇಳೆಗೆ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ವಿವರ ಲಭ್ಯವಾಗಲಿದೆ.